ಹಾಲವಾಣ( )ಪರ್ಣಪಾತಿ ಮರ.ಉಷ್ಣವಲಯದಲ್ಲಿ ಬೆಳೆಯುವ ಮರ ಜಾತಿ.ಆಫ್ರಿಕ,ಏಷ್ಯಾ,ಆಸ್ಟ್ರೇಲಿಯ ಖಂಡಗಳಲ್ಲದೆ,ಹಿಂದೂ ಮಹಾಸಾಗರದ ಹಲವಾರು ದ್ವೀಪಸಮೂಹಗಳಲ್ಲಿ ಕಂಡುಬರುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಫಬಾಸಿ ()ಕುಟುಂಬಕ್ಕೆ ಸೇರಿದ್ದು,ಎರಿತ್ರಿನ ವೆರಿಗಟ ( ),ಎರಿತ್ರಿನ ಇಂಡಿಕ ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. == ಸಸ್ಯದ ಗುಣಲಕ್ಷಣಗಳು == ಪರ್ಣಪಾತಿಮರ.ಹವಳಗೆಂಪು ಬಣ್ಣದ ಅಂದವಾದ ಹೂಗಳು.(ಚಿತ್ರ ನೋಡಿ).ಎಳೆಯ ಕೊಂಬೆಗಳು ಮುಳ್ಳಿನಿಂದ ಕೂಡಿವೆ.ದಾರುವು ಹಗುರವಾಗಿದ್ದು ಬಿಳಿ ಬಣ್ಣದ್ದಾಗಿರುತ್ತದೆ. == ಉಪಯೋಗಗಳು == ಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.ಅರಗಿನ ಮೆರಗುಕೊಟ್ಟು ಮಾಡುವ ಸಾಮಾನುಗಳನ್ನು ತಯಾರಿಸಲು ಬಳಸುತ್ತಾರೆ.ಬೆಂಕಿ ಕಡ್ಡಿ ಮಾಡಲು ಉಪಯೋಗಿಸಲ್ಪಡುತ್ತದೆ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ