ಹಾಲುಮಡ್ಡಿಯು ಸೈಮಾರುಬೇಸೀ ಕುಟುಂಬದ ಐಲಾಂತಸ್ ಮಲಬಾರಿಕ ಪ್ರಭೇದದ ಮರ. ಪಶ್ಚಿಮ ಘಟ್ಟದ ಮಲೆನಾಡಿನ, ನಿತ್ಯಹರಿದ್ವರ್ಣದ ತೇವಮಯ ಕಾಡುಗಳಲ್ಲಿ ಕಂಡುಬರುತ್ತದೆ. ಪರ್ಣಪಾತಿ ಮರ. ಫೆಬ್ರವರಿ-ಮಾರ್ಚ್‌ನಲ್ಲಿ ಹೂಮೂಡಿ, ಕಾಯಿ ಏಪ್ರಿಲ್-ಮೇನಲ್ಲಿ ಪಕ್ವವಾಗುವುವು. == ವಿವರ == ಈ ಮರವು ೩೦ ಮೀ. ಎತ್ತರದವರೆಗೆ ಬೆಳೆಯಬಹುದು. ವ್ಯಾಸ ೧.೨ ಮಿ. ಇರಬಹುದು. ತೊಗಟೆಯು ಬೂದು ಬಣ್ಣದ್ದಾಗಿದ್ದು ಸ್ವಲ್ಪಮಟ್ಟಿಗೆ ಒರಟಾಗಿರುತ್ತದೆ. ಮುಟ್ಟಲು ಮರಳು ಕಾಗದವನ್ನು ಹೋಲುತ್ತದೆ. == ಉಪಯೋಗಗಳು == ಇದರಿಂದ ಬರುವ ರಾಳವೇ ಸುವಾಸನೆಯುಳ್ಳ ಹಾಲುಮಡ್ಡಿ ಧೂಪ. ಈ ರಾಳವನ್ನು ಧೂಪದ್ರವ್ಯದಲ್ಲಿ ಬಳಸಬಹುದು. ತೊಗಟೆಯನ್ನು ಕತ್ತರಿಸಿದಾಗ, ಅಂಟಂಟಾದ ರಾಳ ಸ್ರವಿಸುತ್ತದೆ. ಇದು ಒಣಗಿದಾಗ ಭಿದುರವಾಗುತ್ತದೆ. ಈ ರಾಳವನ್ನು ಔಷಧೀಯ ಉದ್ದೇಶಗಳಿಗೂ ಬಳಸಬಹುದು. ಚೌಬೀನೆಯನ್ನು ಬೆಂಕಿಕಡ್ಡಿ ಮತ್ತು ಪ್ಲೈವುಡ್ ತಯಾರಿಸಲು ಬಳಸಬಹುದು. == ಚಿತ್ರಸಂಪುಟ == == ಉಲ್ಲೇಖಗಳು ==