ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯು ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಇದನ್ನ್ನು ಬಡವರ ಊಟಿ ಎಂದೂ ಕರೆಯುುತ್ತಾರೆ. ಹಾಸನದ ಜನಗಳು ರಾಜಕೀಯ ಮತ್ತ್ತುಆರ್ಥಿಕತೆಯ ಬಗ್ಗ್ಗೆ ಬಹಳ ತಿಳುವಳಿಕೆ ಉಳ್ಳವರಾಗಿದ್ದ್ದಾರೆ == ಜನಸಂಖ್ಯಾ ವಿವರ == ೨೦೧೧ರ ಜನಗಣತಿಯ ಪ್ರಕಾರ, ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. == ಶಿಕ್ಷಣ == ಹಾಸನ ನಗರದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ೧ ಸರ್ಕಾರಿ ವೈದ್ಯಕೀಯ, ೧ ಖಾಸಗಿ ದಂತ ವೈದ್ಯಕೀಯ ಮತ್ತು ೧ ಆರ್ಯುವೇದ ಕಾಲೇಜುಗಳಿವೆ. ತಾಂತ್ರಿಕ ಶಿಕ್ಷಣಕ್ಕಾಗಿ ಪ್ರಖ್ಯಾತ ಮಲೆನಾಡು ತಾಂತ್ರಿಕ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಒಟ್ಟು ೪ ಇಂಜಿನಿಯರಿಂಗ್ ಕಾಲೇಜು ಮತ್ತು ಒಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ತಾಂತ್ರಿಕ ಡಿಪ್ಲೊಮ ಮತ್ತು ಕೈಗಾರಿಕ ತರಬೇತಿ ಕಾಲೇಜುಗಳಿವೆ. ಕೆಲವು ಪ್ರಖ್ಯಾತ ಶಾಲೆಗಳು ಮತ್ತು ಕಾಲೇಜುಗಳು ಈ ಕೆಳಗಿನಂತಿವೆ: == ಹಾಸನದ ಕುರಿತು ಕೆಲವು ಅಂಶಗಳು == ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ. ಹಾಸನದಲ್ಲಿ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯುತ್ತ) ಹಾಸನ ಇಲ್ಲಿ ವರ್ಷದಿಂದ ವರ್ಷಕ್ಕೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ. ಈ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು: ಉತ್ತಮ ಗ್ರಂಥಾಲಯದ ಸೌಲಭ್ಯ ಹೊಂದಿದೆ. ಎನ್ ಎಸ್ ಎಸ್ 2 ಘಟಕಗಳನ್ನು ಹೊಂದಿದೆ. ಎನ್ ಸಿ ಸಿ ಯನ್ನು ಸಹ ಒಳಗೊಂಡಿದೆ. ಉತ್ತಮವಾದ ಕ್ರಿಂಡಾಂಗಣವನ್ನು ಹೊಂದಿದೆ. ಅಂತಿಮ ಪದವಿ ವಿದ್ಯಾರ್ಥಿಗಳು ಪ್ರಾಜೆಕ್ಟ್ನ್ನು ನಿರ್ದಿಷ್ಟ ವಿಷಯ ಕುರಿತು ಸಂಶೋಧನೆ ಕೈಗೂಳ್ಳಬೇಕು. ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ. ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಇಲ್ಲಿನ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದರ ಜೊತೆಗೆ ಮೈಸೂರು ಮಿನರಲ್ಸ್ ರವರು ನಡೆಸುವ ಕ್ರೋಮೈಟ್ ಗಣಿಗಾರಿಕೆಯು ಆರ್ಥಿಕತೆಗೆ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಹಾಸನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( )ದ ಪ್ರಮುಖ ನಿಯಂತ್ರಣ ಕೇಂದ್ರವು ಸಹಾ ಹಾಸನದಲ್ಲಿ ನೆಲೆಗೊಂಡಿದೆ. ಹಾಸನಕ್ಕೆ ರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ. == ದೊಡ್ಡ ಭಾಗನಹಳ್ಳಿ ಗ್ರಾಮ == ಈ ಗ್ರಾಮವು ಹಾಸನ ತಾಲೂಕು ಹಾಸನ ಜಿಲ್ಲೆಯಲ್ಲಿರುವ ಒಂದು ಸಾಮಾನ್ಯ ಗ್ರಾಮವಾಗಿದೆ. === ಗ್ರಾಮದ ಹಿನ್ನಲೆ : === ಈ ಗ್ರಾಮಕೆ ದೊಡ್ಡಬಾಗ ನಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಅಕ್ಕ -ಪಕ್ಕ ಎರಡು ಹಳ್ಳಿಗಳಿದ್ದು ಈ ಹಳ್ಳಿಗಳಿಗೆ ಏನೆಂದು ಹೆಸರು ಕೊಡಬೇಕೆಂದು ಗೊಂದಲವು ಪ್ರಾರಂಭವಾಯಿತು. ಈ ಎರಡು ಗ್ರಾಮಗಳಿಂದ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವಿತ್ತು. ಅ ದೇವಸ್ಥಾನಕೆ ಪೂಜೆ ಮಾಡಿಸಲು ಹೋದಾಗ ತೆಂಗಿನಕಾಯಿ ಹೊಡೆಯಲು ಹೋದಾಗ ಎರಡು ಭಾಗವಾಗಿ ಹೊಡೆದು ಚಿಕ್ಕ ಭಾಗ ಒಂದು ಕಡೆ ಹೋಗಿ ಚಿಕ್ಕಬಾಗನಹಳ್ಳಿ ಎಂದು ಹಾಗು ದೊಡ್ಡ ಭಾಗ ಹೋದ ಕಡೆಗೆ ದೊಡ್ಡ ಬಾಗನಹಳ್ಳಿ ಎಂದು ಈ ಗ್ರಾಮಗಳಿಗೆ ನಾಮಕರಣವಾಯಿತು. ==== ಬೌಗೊಲಿಕ ಲಕ್ಷ್ಮಣ ==== ಈ ಪ್ರದೇಶ ದಕ್ಷಿಣ ಕರ್ನಾಟಕವಾಗಿದ್ದು ಎಲ್ಲಿ ಉತ್ತಮ ರೀತಿಯ ವಾತಾವರಣವನ್ನು ಹೊಂದಿದೆ. ಉತ್ತಮ ಮಳೆಯನು ಪಡೆಯುವುದು. "ಬಡವರ ಊಟಿ "ಎಂದು ಚಿರಪರಿಚಯವಾಗಿದೆ. ಧಾರ್ಮಿಕ ಹಬ್ಬಗಳು ಎಲ್ಲಿನ ಬಂಡಿ ಹಬ್ಬವು ತುಂಬಾ ವಿಶೇಷತೆಯನು ಹೊಂದಿದೆ. 7 ಗ್ರಾಮಗಳು ಸೇರಿ ಆಚರಿಸುವ ಈ ಹಬ್ಬವಾಗಿದೆ. ಆಯುಧ ಪೂಜೆ ಪ್ರಾಮುಖ್ಯತೆ ಪಡೆದುಕೊಂಡಿದೆ. ==== ಆರ್ಥಿಕತೆ : ==== ಇಲ್ಲಿ ಬಡ ವರ್ಗ ಹಾಗೂ ಮಾಧ್ಯಮ ವರ್ಗದವರನು ಕಾಣಬಹುದು. ಕೃಷಿಗೂ ಆದ್ಯತೆ ಹಾಗೂ ಕಲ್ಲು ಗಣಿಗಾರೀಕೆಯು ಜನರ ಆರ್ಥಿಕತೆಯನು ಉತ್ತಮಗೊಳಿಸಿದೆ. ==== ಜನಸಂಖ್ಯೆ : ==== ಈ ಊರಿನಲ್ಲಿ 250 ಕೂ ಹೆಚ್ಚು ಮನೆಗಳಿವೆ.1k ಜನಸಂಖ್ಯೆಯನು ಕಾಣಬಹುದು. ==== ಧರ್ಮ ಮತ್ತು ಜಾತಿ : ==== ಎಲ್ಲಿ ಹಿಂದೂ ಧರ್ಮದವರು ಮಾತ್ರ ಇದ್ದಾರೆ. ಪ್ರಮುಖವಾಗಿ ಒಕ್ಕಲಿಗರಿದ್ದಾರೆ,ಪರಿಶಿಷ್ಟ ಜಾತಿ ಜನಗಳನು ಕಾಣಬಹುದು. ==== ನೆರೆ ಹೊರೆಯ ಊರುಗಳು : ==== ಚಿಕ್ಕ ಬಾಗನಹಳ್ಳಿ , ಆಗಿಲೆ, ಹ್ಯಾರಾನೆ, ಇಂದ್ರಪುರ. ==== ದೇವಸ್ಥಾನಗಳು : ==== ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ಮುಜಾರಾಯಿ ಇಲಾಖೆಗೆ ಸೇರಿದೆ. ಪಕ್ಕದಲ್ಲಿ ಬೆಟ್ಟದ ಮೇಲೆ ಕುಂತಿಅಮ್ಮ, ಭೀಮರಾಯನ ದೇವಸ್ಥಾನವಿದೇ. === ಶಿಕ್ಷಣ : === ಜನಸಂಖ್ಯೆ ಯಲ್ಲಿ ಹೆಚ್ಚಿನ ಭಾಗದವರು ಪದವಿ ಪೂರ್ವ ಶಿಕ್ಷಣ ಪಡೆದು ಕೊಂಡಿದಾರೆ.ಪದವಿ ಯನು ಪಡೆದುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲಿ, ಉನ್ನತ ಶಿಕ್ಷಣವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಕೊಂಡಿದ್ದಾರೆ.ಅದರು ಕಾಲೇಜು ಶಿಕ್ಷಣ ಇಲಾಖೆ ಸೇರಿಯಿಲ್ಲ == ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜು: == ಶಿಕ್ಷಣ ಪೇಮಿಗಳೂ, ದಾನಿಗಳೂ ಆದ ಶ್ರೀ.ಎ.ಎನ್.ವರದರಾಜುಲು ಅವರು ತಮ್ಮ ಧರ್ಮಪತ್ನಿ ಶ್ರೀಮತಿ. ಕಾಂತಮ್ಮ ನವರ ಹೆಸರಿನಲ್ಲಿ ನೀಡಿದ ೭೫೦೦೦/ ರೂಪಾಯಿಗಳನ್ನು ಸ್ವಿಕರಿಸಿದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯು ಮಲೆನಾಡು ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆಂದು ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜನ್ನು ೧೯೬೬ ರಲ್ಲಿ ಪ್ರಾರಂಭಿಸಿತು. ಅಂದಿನಿಂದಲೂ ಕಾಲೇಜು ಸತತವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ಇದೊಂದು ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. == ಅರಕಲಗೂಡು == == ಹವಾಮಾನ == ಸಾಧಾರಣವಾಗಿ ಹಾಸನದಲ್ಲಿ ತಾಪಮಾನ ೧೮ ° (೬೪ °)ಗಿಂತ ಹೆಚ್ಚಾಗಿರುತ್ತದೆ ಮತ್ತು ಅತಿ ಕಡಿಮೆ ಮಳೆಯಾಗುವ ತಿಂಗಳಲ್ಲಿ ೬೦mm (೨.೩೬ )ಗಿಂತ ಕಡಿಮೆ ಮಳೆಯಾಗುತ್ತದೆ. == ಹತ್ತಿರದ ಸ್ಥಳಗಳು ಮತ್ತು ಐತಿಹಾಸಿಕ ಪ್ರವಾಸಿ ಕೇಂದ್ರಗಳು == == ಉಲ್ಲೇಖಗಳು‌‌ ==