ಹುಣಸೂರು ಮೈಸೂರು ಜಿಲ್ಲೆಯ ಒಂದು ನಗರವಾಗಿದೆ. ಇದು ಭಾರತ ದೇಶದಲ್ಲಿದೆ. == ಭೂಗೋಳಶಾಸ್ತ್ರ == ಹುಣಸೂರು ಇದು ಸರಾಸರಿ ಸಮುದ್ರ ಮಟ್ಟದಿಂದ ೮೦೫ ಮೀಟರ್ (೨,೬೪೧ ಅಡಿ) ಎತ್ತರದಲ್ಲಿದೆ. ಲಕ್ಷ್ಮಣ ತೀರ್ಥ ನದಿಯು ಹುಣಸೂರು ಪಟ್ಟಣದ ಮೂಲಕ ಹರಿಯುತ್ತದೆ ಮತ್ತು ನದಿಗೆ ಅಡ್ಡಲಾಗಿ ಎರಡು ಸೇತುವೆಗಳನ್ನು ನಿರ್ಮಿಸಲಾಗಿದೆ. ಹುಣಸೂರು ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿದೆ. ಇದು ಮೈಸೂರು, ಬೆಂಗಳೂರು ಮತ್ತು ಮಂಗಳೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಮೈಸೂರಿನಿಂದ ೪೫ ಕಿ.ಮೀ ಮತ್ತು ಬೆಂಗಳೂರಿನಿಂದ ೧೭೫ ಕಿ.ಮೀ ದೂರದಲ್ಲಿದೆ. ಹುಣಸೂರು ಮೂಲಕ ಹಾದುಹೋಗುವ ಇತರ ಪ್ರಮುಖ ಹೆದ್ದಾರಿಗಳೆಂದರೆ ರಾಜ್ಯ ಹೆದ್ದಾರಿ -೮೮, ರಾಜ್ಯ ಹೆದ್ದಾರಿ -೮೬ ಮತ್ತು ರಾಜ್ಯ ಹೆದ್ದಾರಿ -೯೦. == ಜನಗಳು == ಡಿ.ದೇವರಾಜ ಅರಸು, ಮಾಜಿ ಮುಖ್ಯಮಂತ್ರಿ ಹುಣಸೂರು ಕೃಷ್ಣಮೂರ್ತಿ ಕನ್ನಡ ಚಲನಚಿತ್ರೋದ್ಯಮದ ನಿರ್ದೇಶಕ ಕೆಂಪರಾಜ್ ಅರಸ್, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್, ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ. == ಇದನ್ನೂ ನೋಡಿ == ಸಾಲಿಗ್ರಾಮ, ಮೈಸೂರು == ಉಲ್ಲೇಖಗಳು ==