ಹೆತ್ತುತ್ತಿ ಸಸ್ಯವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಸಿಡಾ ಕಾರ್ಡಿಫ಼ೋಲಿಯಾ. ಹೆತ್ತುತ್ತಿಯು ಬಲಾದಿವರ್ಗ ಎಂಬ ಸಸ್ಯವರ್ಗಕ್ಕೆ ಸೇರಿದೆ. == ಸಸ್ಯಪರಿಚಯ == ಹೆತ್ತುತ್ತಿಯು ಪೊದೆಯ ರೂಪದಲ್ಲಿ ಬೆಲೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ. ಎಲೆಯು ೨-೫ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ. ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ. == ಇತರ ಹೆಸರುಗಳು == ಹಿಂದಿ-ಕುಂಗಿ, ಖರೇಂಟ. ಬಂಗಾಳಿ-ಬಲ. ಗುಜರಾತಿ-ಬಲದನ. ಮಲಯಾಳಂ- ಕತ್ತುರಂ. ತಮಿಳು- ನೀಲಕುತ್ತಿ. ಸಂಸ್ಕೃತ-ಜಯಂತಿ. ಒರಿಯಾ-ಬಡಿಯನನಲ. ಮರಾಠಿ-ಚಿಕನ. ತೆಲುಗು-ಚಿರುಬೆಂಡ. == ಉಪಯೋಗಗಳು == ಹೆತ್ತುತ್ತಿಯ ಎಲ್ಲಾ ಭಾಗವನ್ನು ಔಷಧವಾಗಿ ಉಪಯೋಗಿಸಬಹುದಾಗಿದೆ. ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ, ಶೀತ, ಕೆಮ್ಮು ಮುಂತಾದವುಗಲನ್ನು ನಿವಾರಿಸಲು ಹುತ್ತತ್ತಿಯು ಸಹಾಯಕವಾಗಿದೆ. ಇದರ ಚೂರ್ಣವು ಅನೇಕ ಸ್ತ್ರೀರೋಗಗಳನ್ನು, ನರದೌರ್ಬಲ್ಯವನ್ನು ನಿವಾರಿಸುತ್ತದೆ. ಬೇರಿನ ರಸವನ್ನು ಗಾಯಕ್ಕೆ ಉಪಯೊಗಿಸಬಹುದಾಗಿದೆ. ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯುವನ್ನು ಗುಣಮುಖಗೊಳೀಸುತ್ತದೆ. == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == , (2006). : . /. 0-7234-3410-7. ://.././/-/394- 2010-10-17 ವೇಬ್ಯಾಕ್ ಮೆಷಿನ್ ನಲ್ಲಿ. ://./------Cid1081