ಹೆಬ್ಬಲಸು ಇದು ದೊಡ್ಡ ಪ್ರಮಾಣದ ಎತ್ತರವಾದ,ನೇರ ಕಾಂಡದ ಮರ.ಕರ್ನಾಟಕದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಿಶೇಷವಾಗಿ ಕಂಡು ಬರುವುದು.ಇದು ಹಲಸಿನ ಒಳಜಾತಿಗಳಲ್ಲಿ ಒಂದು. == ಸಸ್ಯಶಾಸ್ತ್ರೀಯ ವರ್ಗೀಕರಣ == ಅರ್ಟೋಕಾರ್ಪಸ್ ಹಿರ್ಸೂಟ( )ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಇದು ಮೊರಾಸಿ ()ಕುಟುಂಬಕ್ಕೆ ಸೇರಿದೆ.ಇದಕ್ಕೆ 'ಕಾಡುಹಲಸು','ಕಬ್ಬಲಸು'ಎಂದೂ ಕರೆಯುತ್ತಾರೆ.ತುಳುಬಾಷೆಯಲ್ಲಿ 'ಪಿಜಕಾಯಿ, ಪೆಜಕಾಯಿ'ಎಂದು ಹೆಸರು. == ಸಸ್ಯದ ಗುಣಲಕ್ಷಣಗಳು == ಇದರೆ ಎಳೆ ಸಸಿಗಳ ಎಲೆಗಳು ಸೀಳಾಗಿರುತ್ತವೆ.ಬೆಳೆದಂತೆ ಸಮ ಅಂಚಿನ ಅಂಡಾಕಾರದ ಎಲೆಗಳನ್ನು ಕಾಣಬಹುದು.ಉತ್ತಮ ಚೌಬೀನೆ ಜಾತಿಯ ಮರ.ಇದರ ದಾರುವು ಹಳದಿ ಕಂದು ಛಾಯೆ ಹೊಂದಿ ಸಾಧಾರಣ ಗಡಸುತನವನ್ನು ಹೊಂದಿದೆ.ಸಾಧಾರಣ ಹೊಳಪು ಬರುತ್ತದೆ.ತೇವಾಂಶ ಕಡಿಮೆಯಾದಂತೆ ಕಡುಕಂದು ಬಣ್ಣಕ್ಕೆ ತಿರುಗುತ್ತದೆ. == ಉಪಯೋಗಗಳು == ಇದು ಒಂದು ಉತ್ತಮ ಜಾತಿಯ ಚೌಬೀನೆ ಮರ.ದೋಣಿಗಳ ನಿರ್ಮಾಣ,ಪಿಠೋಪಕರಣಗಳ ತಯಾರಿಯಲ್ಲಿ,ಗೃಹನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಉತ್ತಮ ದರ್ಜೆಯ ಪದರಹಲಗೆಗಳ ತಯಾರಿಯಲ್ಲಿ ಬಳಕೆಯಲ್ಲಿದೆ. == ಅಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨.ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ == ಬಾಹ್ಯ ಸಂಪರ್ಕಗಳು == 2011-08-18 ವೇಬ್ಯಾಕ್ ಮೆಷಿನ್ ನಲ್ಲಿ. " " == ಉಲ್ಲೇಖಗಳು ==