ಹೆಸರಘಟ್ಟ ಶಿಲಾಶಾಸನವು ಬೆಂಗಳೂರಿನ ನೆಲಮಂಗಲ ಸಮೀಪದ ಚಂದ್ರಮೌಳೀಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೫೩೩ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3ft. ಇದು ಕನ್ನಡ ಲಿಪಿಯಲ್ಲಿ ಇದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ. ಬೆಂಗಳೂರಿನ ಉತ್ತರದಲ್ಲಿ ೨೭ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು.