ಸಾಮಾನ್ಯವಾಗಿ ಹೇಮಾ ಎಂದೇ ಮನ್ನಣೆ ಪಡೆದ ಹೇಮಲತಾ ಅವರು ಭಾರತೀಯ ನಟಿ ಮತ್ತು ನೃತ್ಯಗಾರ್ತಿಯಾಗಿದ್ದಾರೆ. ಸ್ಟಾರ್ ವಿಜಯ್‌ನಲ್ಲಿ ಜನಪ್ರಿಯ ಸೋಪ್ ಒಪೆರಾ ಕನಾ ಕಾಣುಮ್ ಕಾಲಂಗಲ್‌ನಲ್ಲಿ ರಾಘವಿ ಪಾತ್ರದಲ್ಲಿ ಮತ್ತು ಸನ್ ಟಿವಿ ತೆಂಡ್ರಾಲ್‌ನಲ್ಲಿ ಸೂಪರ್‌ಹಿಟ್ ತಮಿಳು ನಾಟಕ ಧಾರಾವಾಹಿಯಲ್ಲಿ ದೀಪಾ ಪಾತ್ರಕ್ಕಾಗಿ ಇವರು ಮೆಚ್ಚುಗೆ ಪಡೆದಿದ್ದಾರೆ. ಇವರು ಮೈಕೆಲ್ ತಂಗದುರೈ ಅವರೊಂದಿಗೆ ಸೀಸನ್ ೩ ರಲ್ಲಿ ಜೋಡಿ ನಂಬರ್ ಒನ್ ರಿಯಾಲಿಟಿ ಡ್ಯಾನ್ಸ್ ಶೋ ವಿಜೇತರಾಗಿದ್ದರು. == ವೃತ್ತಿ == ಹೇಮಲತಾ ಅವರು ತಮಿಳು ಕುಟುಂಬದಲ್ಲಿ ಜನಿಸಿದರು. ಇವರು ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ರಜನಿಕಾಂತ್ ಅಭಿನಯದ ಮತ್ತು ಸೂಪರ್ ಹಿಟ್ 'ಬಾಷಾ' ನಲ್ಲಿ ನಟಿಸುವುದರ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ನಂತರ ಇವರು 'ಶರತ್ ಕುಮಾರ್' ಅಭಿನಯದ 'ಸೂರ್ಯವಂಶ 'ಚಿತ್ರದಲ್ಲಿ ನಟಿಸಿದರು. ಇವರ ಮೊದಲ ತಮಿಳು ಧಾರಾವಾಹಿ 'ಚಿತಿ'ಯಲ್ಲಿ 'ಬೇಬಿ ಕಾವೇರಿ' ಪಾತ್ರವನ್ನು ನಿರ್ವಹಿಸಿದರು ಅದರಂತೆ ಹೇಮಾ ಅವರು 'ಕನಾ ಕಾಣುಮ್ ಕಾಲಂಗಲ್' ನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ 'ರಾಘವಿ' ಪಾತ್ರವನ್ನು ನಿರ್ವಹಿಸಿದರು. ನಂತರ 'ಪ್ರೈಮ್ ಟೈಮ್' ಧಾರಾವಾಹಿ 'ತೆಂಡ್ರಾಲ್‌'ನಲ್ಲಿ 'ದೀಪಾ' ಪಾತ್ರವನ್ನು ನಿರ್ವಹಿಸಿದರು. ಇದರಿಂದ ಹೇಮಾ ಅವರು ಎಲ್ಲರ ಮನೆಮಗಳಂತಾದರು. ಅಷ್ಟೆ ಅಲ್ಲದೇ ದೂರದರ್ಶನದ ಉನ್ನತ ನಟಿಯರಲ್ಲಿ ಇವರು ಕೂಡ ಒಬ್ಬರಾದರು. == ದೂರದರ್ಶನ == === ಚಿತ್ರಕಥೆ === == ಉಲ್ಲೇಖಗಳು ==