ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ. ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.