ಹೊಂಡುರಾಸ್ ಮಧ್ಯ ಅಮೆರಿಕದಲ್ಲಿನ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯ. ಹಿಂದೆ ಸ್ಪೆಯ್ನ್‌ನ ವಸಾಹತಾಗಿದ್ದ ಸಮಯದಲ್ಲಿ ಈ ನಾಡನ್ನು ಸ್ಪಾನಿಷ್ ಹೊಂಡುರಾಸ್ ಎಂದು ಕರೆಯಲಾಗುತ್ತಿತ್ತು. ಹೊಂಡುರಾಸ್‌ನ ಪಶ್ಚಿಮದಲ್ಲಿ ಗ್ವಾಟೆಮಾಲ, ನೈಋತ್ಯದಲ್ಲಿ ಎಲ್ ಸಾಲ್ವಡೋರ್, ಆಗ್ನೇಯದಲ್ಲಿ ನಿಕಾರಾಗುವ ದೇಶಗಳು ಹಾಗೂ ದಕ್ಷಿಣದಲ್ಲಿ ಶಾಂತ ಮಹಾಸಾಗರ ಮತ್ತು ಉತ್ತರದಲ್ಲಿ ಕೆರಿಬ್ಬಿಯನ್ ಸಮುದ್ರದ ಅಂಗವಾದ ಹೊಂಡುರಾಸ್ ಕೊಲ್ಲಿಗಳಿವೆ.