ಹೊಳೆತುಂಬೆ(ಆದಿರಾಜ,ನೆರ್ವಾಳ,ಹೊಳೆನೆಕ್ಕಿ)ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ.ಜಪಾನ್,ಆಸ್ಟ್ರೇಲಿಯಹಾಗೂ ದಕ್ಷಿಣ ಏಷಿಯಾಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಕಪ್ಪರಾಸಿಕ()ಕುಟುಂಬಕ್ಕೆ ಸೇರಿದ್ದು,ಕ್ರಾಟೆವಾ ರೆಲಿಜಿಯೋಸ ( )ಎಂದು ಸಸ್ಯಶಾಸ್ತ್ರೀಯ ಹೆಸರಿದೆ. ತುಳು ಭಾಷೆಯಲ್ಲಿ ತುದೆಮದರಂಗಿಎಂದು ಹೆಸರು. == ಸಸ್ಯದ ಗುಣಲಕ್ಷಣಗಳು == ಸಣ್ಣಪ್ರಮಾಣದ ಮರ.ಉದ್ದನೆಯ ತೊಟ್ಟಿನ ಎಲೆಗಳಿವೆ.ಬೂದು ಬಣ್ಣದ ತೊಗಟೆ.ಬಿಳಿ ಮಾಸಲು ಹಳದಿ ಬಣ್ಣದ ಹೂ ಗಳು ಎಪ್ರಿಲ್-ಮೇ ತಿಂಗಳಲ್ಲಿ ಕಂಡು ಬರುತ್ತದೆ.ಹೆಚ್ಚಾಗಿ ನದಿ,ತೊರೆ ಹಾಗೂಹಳ್ಳಗಳ ದಡಗಳಲ್ಲಿ ಬೆಳೆಯುತ್ತದೆ. == ಉಪಯೋಗಗಳು == ದಾರುವು ಮೃದುವಾಗಿದ್ದು,ಸಮಾನ ಕಣರಚನೆ ಹೊಂದಿರುವುದರಿಂದ ಬಾಚಣಿಗೆ,ತಬಲಾ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ತೊಗಟೆ,ಬೇರು,ಎಲೆ ಮೂತ್ರಾಂಗ ಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ. == ಆಧಾರ ಗ್ರಂಥಗಳು == 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.