"ಹೊಸಗುಂದ" ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ದಿಂದ ೨೨ ಕಿ.ಮೀ ದೂರದಲ್ಲಿದೆ. == ಇತಿಹಾಸ == ಕೇರಳದ ರಾಜನೊಬ್ಬ ಈ ಭಾಗಕ್ಕೆ ಬಂದಾಗ ಆತನಿಗೆ ಲಕ್ಷ್ಮೀ ವಿಗ್ರಹದೊಂದಿಗೆ ಗಣಪತಿಯ ವಿಗ್ರಹ ದೊರಕಿತಂತೆ. ಆದ್ದರಿಂದ ಆ ಗಣಪತಿಗೆ ಲಕ್ಷ್ಮೀ ಗಣಪತಿ ಎಂಬ ಹೆಸರು ಬಂದಿತು, ಈ ತರಹದ ಲಕ್ಷ್ಮೀ ಗಣಪತಿಗಳು ಕೇರಳದಲ್ಲಿವೆ, ಆದರೆ ಕರ್ನಾಟಕದಲ್ಲಿರುವುದು ಇದೊಂದೇ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾಂತರಸರು ( ಹೊಯ್ಸಳರು ) ತದನಂತರ ೧೦ನೇ ಶತಮಾನದ ಸುಮಾರಿಗೆ ಇಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದರಂತೆ.ಅದರಲ್ಲಿ ಮುಖ್ಯವಾದುದು ಉಮಾಮಹೇಶ್ವರ ದೇವಸ್ಥಾನ. ಈ ದೇವಾಲಯ ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾಪಥಗಳನ್ನು ಹೊಂದಿದೆ. ಮುಖಮಂಟಪದಲ್ಲಿ ೨೦ ಕಂಬಗಳಿದ್ದು, ೩ ಕಡೆಯಿಂದ ದ್ವಾರಗಳಿವೆ . ನವರಂಗದ ದ್ವಾರಕ್ಕೆ ಜಾಲಂಧ್ರಗಳಿದ್ದು, ಬದಿಯಲ್ಲಿ ಕಿಟಕಿಯಂತಹ ರಚನೆಯಿದೆ. ಪಾಳುಬಿದ್ದಿದ್ದ ದೇಗುಲದ ಗರ್ಭಗುಡಿಯಲ್ಲಿ ಮೊದಲಿನಿಂದಲೂ ಶಿವಲಿಂಗವಿರಲಿಲ್ಲವಂತೆ. ಈಗ ದೇಗುಲದ ಜೀರ್ಣೋದ್ದಾರ ಪ್ರಕ್ರಿಯೆ ನಡೆಯುತ್ತಿದ್ದು ನೂತನವಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಿದ್ದಾರಂತೆ. ಉಮಾಮಹೇಶ್ವರ ದೇಗುಲವಲ್ಲದೇ ಇಲ್ಲಿ ವೀರಭದ್ರ, ಸುಬ್ರಹ್ಮಣ್ಯ, ಕಂಚಿ ಕಾಳಮ್ಮ, ಪ್ರಸನ್ನನಾಥ, ಚೌಡೇಶ್ವರಿ ದೇಗುಲಗಳೂ ಇವೆ. == ಉಲ್ಲೇಖಗಳು ==