ಚಿತ್ರದುರ್ಗದ ಆರು ತಾಲ್ಲೂಕುಗಳಲ್ಲಿ ಪ್ರಮುಖವಾದ ತಾಲ್ಲೂಕಾಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ.ಈ ಹೊಸದುರ್ಗದ ಸುತ್ತಲೂ ಕೋಟೆ ಇದ್ದು ಐದನೇ ಮದಕರಿನಾಯಕನ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸುಂದರ ಪಟ್ಟಣವು "ವೇದಾವತಿ" ಹಿನ್ನೀರು ಪ್ರದೇಶದಲ್ಲಿದ್ದು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. == ಜನಸಂಖ್ಯೆ == ಸನ್. ೨೦೦೧ ರ ಜನಗಣತಿಯ ಪ್ರಕಾರ, ಹೊಸದುರ್ಗದಲ್ಲಿ ೨೨,೪೮೦ ಜನ ಪುರುಷರು, ಒಟ್ಟು ಜನಸಂಖ್ಯೆಯ ೫೨% ರಷ್ಟು, ಹಾಗೂ ೪೮% ಮಹಿಳೆಯರು ವಾಸಿಸಿದ್ದರು. ಸರಾಸರಿ, ೭೨% ಅಕ್ಷರತೆ ಇದೆ. ರಾಷ್ಟ್ರದ ಸಾಕ್ಷರತೆಗಿಂತ ೫೯.೫% ಹೆಚ್ಚು. ಪುರುಷರು ೭೬%, ಮತ್ತು ಮಹಿಳೆಯರು, ೬೮%. ಹೊಸದುರ್ಗದ ಸರಾಸರಿ ೧೨% ಮಕ್ಕಳು ೬ ವರ್ಷಕ್ಕಿಂತ ಕಡಿಮೆಯವರು. == ಆರ್ಥಿಕತೆ == ಕೃಷಿಯೇ ಇಲ್ಲಿನ ಜೀವಾಳ. ಈ ತಾಲೂಕಿನಲ್ಲಿ ಹೆಚ್ಚು ಕಾರ್ಖಾನೆಗಳಿಲ್ಲ. ಭೂಮಿಯಲ್ಲಿ ಸುಣ್ಣದ ಕಲ್ಲು, ಬಾಕ್ಸೈಟ್, 'ಕಬ್ಬಿಣದ ಅದುರು,' 'ಮ್ಯಾಂಗನೀಸ್,' 'ಡೊಲೊಮೈಟ್ ಮೊದಲಾದ ಹಲವಾರು ಖನಿಜಗಳು ದೊರೆತರೂ, ಹೊಸದುರ್ಗದಲ್ಲಿ ಸಿಮೆಂಟ್ ಕಾರ್ಖಾನೆಯೊಂದನ್ನು ಬಿಟ್ಟರೆ ಬೇರೆ ಕಾರ್ಖಾನೆಗಳಿಲ್ಲ. ಕಬ್ಬಿಣವನ್ನು ತಯಾರಿಸುವ ಘಟಕಗಳು ಹತ್ತಿರದಲ್ಲೇ ಇವೆ. ಹೊಸದುರ್ಗದ 'ಮತ್ತೋಡು' ಗ್ರಾಮದಲ್ಲಿ 'ರೆಮ್ಕೊ ಪೋರ್ಟ್ ಲ್ಯಾಂಡ್ ಸಿಮೆಂಟ್, ತಯಾರಿಕಾ ಘಟಕ'ವಿದೆ. ಹೊಸದುರ್ಗದಲ್ಲಿ ತೆಂಗಿನಕಾಯಿ ಅತಿ ಹೆಚ್ಚಾಗಿ ಉತ್ಪನ್ನವಾಗುತ್ತದೆ. ತೆಂಗಿನ ಎಣ್ಣೆ ತಯಾರಿಕೆಯ ಕಾರ್ಖಾನೆಗಳು, ತೆಂಗಿನ ನಾರಿನಿಂದ ಹಗ್ಗ ಹೊಸೆಯುವ ಚಿಕ್ಕ-ಪುಟ್ಟ ಗೃಹೋದ್ಯೋಗಗಳು ಚಾಲ್ತಿಯಲ್ಲಿವೆ. == ಪ್ರೇಕ್ಷಣೀಯ ಸ್ಥಳಗಳು == ಹಾಲು ರಾಮೇಶ್ವರ "ಉದ್ಭವಗಂಗೆ" ಎಂದೇ ಕರೆಸಿಕೊಳ್ಳುವ ಶಿವೈದ್ನೈನ ಪುಣ್ಯಸ್ಥಳವಾಗಿದ್ದ್ದು ಪ್ರತೀದಿನ ನೂರಾರು ಭಕ್ತಾಧಿಗಳು ಬೇಟಿ ನೀಡಿ ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಮಕ್ಕಳಿಲ್ಲದವರು ಇಲ್ಲಿ ಭಗವಂತನಲ್ಲಿ ಹರಕೆ ಸಲ್ಲಿಸುತ್ತಾರೆ. ಅರೇಹಳ್ಳಿ: "ಕರಿಯಮ್ಮ ದೇವಿ" ಎಂಬ ದೇವಾಲಯವಿದ್ದು ಪ್ರತಿನಿತ್ಯ ಭಕ್ತಾಧಿಗಳು ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳಲು ಬರುತ್ತಾರೆ. ಜಾನಕಲ್ಲು: ಇದು ಐದನೇ ಮದಕರಿನಾಯಾಕನ ಹುಟ್ಟೂರಾಗಿದ್ದು ಈತ ಚಿತ್ರದುರ್ಗದ ಪಾಳೇಗಾರರಲ್ಲೇಲ್ಲಾ ಅತ್ಯಂತ ಪ್ರಸಿದ್ಧ ನಾಯಕನಾಗಿದ್ದಾನೆ. ದಶರಥ ರಾಮೇಶ್ವರ: ಹೆಸರೇ ಸೂಚಿಸುವಂತೆ ಇದೊಂದು ರಾಮಯಣಕ್ಕೆ ಸಂಬಂಧಿಸಿದ ಸ್ಥಳವಾಗಿದ್ದು,ಶ್ರೀರಾಮ ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದನೆಂಬ ಪ್ರತೀತಿ ಇದೆ.ಇಲ್ಲಿ ಸದಾಕಾಲ ನೀರು ಹರಿಯುತ್ತಿರುತ್ತದ್ದು ಪವಿತ್ರಜಲವೆಂಬ ಪ್ರತೀತಿ ಇದೆ. ಶ್ರವಣನನ್ನು ದಶರಥಮಹಾರಾಜನು ಕೊಂದಬಗ್ಗೆ ಪಶ್ಚಾತ್ತಾಪಪಟ್ಟು ಒಂದು ಶಿವಲಿಂಗವನ್ನು ಸ್ಥಾಪಿಸಿ ತನ್ನ ಮಗ ಶ್ರೀರಾಮನ ಜೊತೆ ಪೂಜಿಸಿದ್ದರಿಂದ ಈ ಸ್ಥಳಕ್ಕೆ ದಶರಥ ರಾಮೇಶ್ವರವೆಂಬ ಹೆಸರು ಬಂತು. ಈ ಸ್ಥಳಕ್ಕೆ 'ವಜ್ರ'ವೆಂತಲೂ ಜನ ಕರೆಯುತ್ತಾರೆ. ಬಾಗೂರು: ಇಲ್ಲಿ ಐತಿಹಾಸಿಕವಾದ ಪ್ರಾಚೀನ ಕಾಲದ "ಹೊಯ್ಸಳ"ರ ವಾಸ್ತುಶಿಲ್ಪದಂತಿರುವ ದೇವಾಲಯವಿದ್ದು ನಯನಮನೋಹರವಾಗಿದೆ. ಹೆಗ್ಗೆರೆ:ಅತೀ ಪುರಾತನ ಶಿವಾಲಯವಿದ್ದು.ದಿನನಿತ್ಯ ದೇವಾಲಯದಲ್ಲಿ ಪೂಜೆ ನಡೆಯುತ್ತದ,3ಶೀಲಾ ಶಾಸನ ಕೂಡ ಇದೆ, 2ಮಣ್ಣಲ್ಲಿ ಶೀಲಾಶಾಸನವಿದೆ,ಇನ್ನೊಂದು ಶಿವಾಲಯದಲ್ಲಿ ಪೀಠವಿದ್ದು ಲಿಂಗ ಕಾಳುವಾಗಿದೆ,ಪುರಾತನವಾದ ಶಿವನ ದೇವಾಲಯವು ಅತ್ಯಂತ ಸುಂದರ ಮತ್ತು ಹಳೆಯದು ಅಲ್ಲದೇ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ನಿರೀಕ್ಷೆ...ಎಲ್ಲವೂ ಮುಳ್ಳುಕಂಟಿಗಳಿಂದ ತುಂಬಿದ್ದು ಸ್ವಚ್ಛತೆ ಬೇಕು.. ದೇವಾಲಯದ ಒಳಗೆ ದೊಡ್ಡ ಶಿವಲಿಂಗವಿದೆ ಪ್ರಭಾವಶಾಲಿ... ನಿತ್ಯ ಪೂಜೆ ನಡೆಯುತ್ತದೆ ದೇವಾಲಯದ ವಾಸ್ತುಶಿಲ್ಪ ಮತ್ತು ಕೆತ್ತನೆಗಳು ಬಹಳ ಸೂಕ್ಷ್ಮವಾಗಿವೆ ಐತಿಹಾಸಿಕ ಹೆಗ್ಗುರುತು ಇದೊಂದು ಜೈನರ ಪ್ರಮುಖ ಕೇಂದ್ರವಾಗಿದ್ದು ಇಲ್ಲಿ ಜೈನಬಸದಿ ಇದ್ದು ಸಮನ್ವಯತೆಯ ಸಂಕೇತದಂತಿದೆ. ಕೆಲ್ಲೋಡು : ವೇದಾವತಿ ನದಿಗೆ ಮಾರೀಕಣಿವೆಯ ಹತ್ತಿರ ಅಣೆಕಟ್ಟು ಕಟ್ಟಿದ್ದಾರೆ. ಹೊಸದುರ್ಗಾ ತಾಲ್ಲೂಕಿನ ಮುಖಾಂತರ ಹರಿದು ಹೋಗುವ ವೇದಾವತಿನದಿಯ ನೀರೇ ಹೊಸದುರ್ಗದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುತ್ತದೆ. ಕೆಲ್ಲೋಡಿನಲ್ಲಿ ನೀರು ಶುದ್ಧೀಕರಣದ ಘಟಕವಿದೆ. ಇಲ್ಲಿಂದ ಕೊಳವೆಗಳ ಮೂಲಕ ಹೊಸದುರ್ಗ ಪಟ್ಟಣಕ್ಕೆ ನೀರು ಸರಬರಾಜಾಗುತ್ತದೆ. ಹೊಸದುರ್ಗ ಕೋಟೆ : ಹೊಸದುರ್ಗದ ಬಳಿಯಿರುವ ಬೆಟ್ಟದ ಮೇಲೆ ಕೋಟೆಯಿದೆ. ಚರಿತ್ರಾಕಾರರು ಹೇಳುವ ಪ್ರಕಾರ, ಚಿತ್ರದುರ್ಗ ಹಾಗೂ ಹೊಸದುರ್ಗ ಕೋಟೆಗಳಿಗೆ ಸಂಪರ್ಕಮಾರ್ಗದ ಒಂದು ಸುರಂಗವಿದೆಯಂತೆ. ಪಟೇಲ್ ನಾರಾಯಣಪ್ಪ ಕಿಟ್ಟದಾಳ್ ಈ ಊರಿನ ಗೌಡರು ಜನಪ್ರಿಯ ಪ್ರಜೆಯಾಗಿದ್ದರು ತಿಮನಾಯಕನ ಆಪ್ತರಾಗಿದ್ದರು 1935 ರಲ್ಲಿ ಹರಿಕಥೆ ಶನಿಕಥೆ,ದೇವಿ ಮಹಾತ್ಮೆಗಳನ್ನು ಚಾಚೂ ತಪ್ಪದೆ ಏಸ್ ರಾಮಯ್ಯ ನವರ ವಾಚನೆಗೆ ಸಹಕಾರಿಯಾಗಿದ್ದರು ತಬಲ ಹಾರ್ಮೋನಿಯಂ ಬಳಸಿ ಜನರಿಗೆ ಪರೆವು ಮಾಡಿ ಊಟ ಬಡಿಸುತಿದ್ದರು, ಶಿವನಗರದ ಗಿಣಿವಜ್ರ ಶಿವಲಿಂಗ ದ ಉದ್ಬವ ಬಸವ ಗಂಗೆಯದಾರಾಕಾರ ಕಾಣಬಹುದು. == ಬಾಹ್ಯ ಸಂಪರ್ಕಗಳು == ^ ://../ramanagar_hosadurga_area_pin-. ^ ://../-//// 2012-04-02 ವೇಬ್ಯಾಕ್ ಮೆಷಿನ್ ನಲ್ಲಿ. , ^ , - ^ " 2001: 2001 , , ()". . 2004-06-16. 2008-11-01. ^ ://../. 3. ಹೊಸದುರ್ಗ ತಾಲೂಕಿನ ಕಿರು ಪರಿಚಯ 4. ಹೊಸದುರ್ಗದ ಐದು ಸುತ್ತಿನ ಕೋಟೆ