೨೦೦೬ - ಇಪ್ಪತ್ತೊಂದನೇ ಶತಮಾನದ ಆರನೇ ವರ್ಷ == ಜನನ == == ನಿಧನ == ಜನವರಿ ೫ - ವಜ್ರಮುನಿ ಫೆಬ್ರುವರಿ ೨ - ಎಸ್.ಕೆ.ರಾಮಚಂದ್ರ ರಾವ್ ಏಪ್ರಿಲ್ ೧೨ - ಡಾ.ರಾಜ್‍ಕುಮಾರ್, ಕನ್ನಡ ಚಿತ್ರರಂಗದ ಪ್ರಮುಖ ನಟ ಮೇ ೩ - ಪ್ರಮೋದ್ ಮಹಾಜನ್, ಭಾರತದ ಮಾಜಿ ಕೇಂದ್ರ ಸಚಿವ ಮೇ ೬ - ಟಿ.ಪಟ್ಟಾಭಿರಾಮ ರೆಡ್ಡಿ, ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ನಿರ್ಮಾಪಕ ಜೂನ್ ೨೩ - ಬುಧಿ ಕುಂದೆರನ್, ಕ್ರಿಕೆಟ್ ಆಟಗಾರ ಜುಲೈ ೦೮ - ರಾಜಾ ರಾವ್ ಜುಲೈ ೧೮ - ಶೇಣಿ ಗೋಪಾಲಕೃಷ್ಣ ಭಟ್ ಜುಲೈ ೨೭ - ಮತಿಘಟ್ಟ ಕೃಷ್ಣಮೂರ್ತಿ ಜುಲೈ ೨೯ - ಎಸ್.ಕೆ.ಕರೀಂಖಾನ್ ಆಗಸ್ಟ್ ೬ - ಮಹಾದೇವಿತಾಯಿ ಆಗಸ್ಟ್ ೨೧ - ಉಸ್ತಾದ್ ಬಿಸ್ಮಿಲ್ಲಾ ಖಾನ್, ಜಾನಪದ ತಜ್ಞ ಹಾಗು ಭಾರತದ ಸ್ವಾತಂತ್ರ್ಯ ಹೋರಾಟಗಾರ ಆಗಸ್ಟ್ ೨೭ - ಹೃಷಿಕೇಶ ಮುಖರ್ಜಿ ಸೆಪ್ಟೆಂಬರ್ ೪- ಸ್ಟೀವ್ ಇರ್ವಿನ್ ಸೆಪ್ಟೆಂಬರ್ ೨೪- ಪದ್ಮಿನಿ ಅಕ್ಟೋಬರ್ ೨೪ - ಆರ್.ಆರ್.ಕೇಶವಮೂರ್ತಿ - ಪಿಟೀಲು ವಾದಕರು. ಅಕ್ಟೋಬರ್ ೨೪ - ಸ.ಜ.ನಾಗಲೋಟಿ ಮಠ ಅಕ್ಟೋಬರ್ ೨೯ - ಜಯಶ್ರೀ ನವೆಂಬರ್ ೯ - ಎಚ್.ಜಿ.ರಾಧಾದೇವಿ - ಕಾದಂಬರಿಗಾರ್ತಿ ನವೆಂಬರ್ ೧೪ - ಸೂರ್ಯನಾರಾಯಣ ಚಡಗ - ಕಾದಂಬರಿಕಾರ ಡಿಸೆಂಬರ್ ೩೧ - ಕಾಕೋಳು ಸರೋಜಾರಾವ್ - ಕಾದಂಬರಿಗಾರ್ತಿ == ಪ್ರಮುಖ ವಿದ್ಯಮಾನಗಳು == ಪ್ಯಾಲೆಸ್ಟೀನ್ನಲ್ಲಿ ನಡೆದ ಚುನಾವಣೆಯಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವ ಬಣ ಹಮಾಸ್ ಗೆಲುವು. ಕರ್ನಾಟಕ ರಾಜ್ಯದಲ್ಲಿ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸಮ್ಮಿಶ್ರ ಸರಕಾರ ಪತನ. ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷದ ಸಮ್ಮಿಶ್ರ ಸರಕಾರ ಅಧಿಕಾರ ಸ್ವೀಕಾರ. ಭಾರತ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನದಲ್ಲಿ ಆತಿಥೇಯರೆದುರು ಟೆಸ್ಟ್ ಸರಣಿ ಸೋಲು. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿ ಡ್ರಾನಲ್ಲಿ ಅಂತ್ಯ. ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಎಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿ ಜಯ ಏಪ್ರಿಲ್ ೧೩: ಕಂಠೀರವ ಸ್ಟೂಡಿಯೋದಲ್ಲಿ ಕರ್ನಾಟಕರತ್ನ ಪದ್ಮಭೂಷಣ ಡಾ.ರಾಜ್ ಕುಮಾರ್ರವರ ಅಂತ್ಯಕ್ರಿಯೆ. ಜುಲೈ ೧೧: ಭಾರತದ ಪ್ರಧಾನ ನಗರಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. ಅಪಾರ ಸಾವು ನೋವು. ಜನಜೀವನ ಅಸ್ತವ್ಯಸ್ತ. ಸೆಪ್ಟೆಂಬರ್ ೧೫,೨೦೦೬: ಕ್ಯೂಬಾದ ಹವಾನಾದಲ್ಲಿ ಅಲಿಪ್ತ ಚಳುವಳಿಯ ಶೃಂಗಸಭೆ ಆರಂಭ. ಅಕ್ಟೋಬರ್ ೧೩ : ಬಾಂಗ್ಲಾದೇಶದ ಗ್ರಾಮೀಣ್ ಬ್ಯಾಂಕ್ ಹಾಗು ಅದರ ಸಂಸ್ಥಾಪಕರಾದ ಮೊಹಮ್ಮದ ಯೂನುಸ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ.