೨೦೧೨ ರವಿವಾರದಿಂದ ಆರಂಭವಾದ ಅಧಿಕ ವರ್ಷವಾಗಿದ್ದು, ಕ್ರಿಸ್ತಶಕೆಯ ೨೦೧೨ ನೇ ವರ್ಷವಾಗಿದೆ. ಇದು ಮೂರನೇ ಸಹಸ್ರಮಾನದ ಮತ್ತು ೨೧ನೇ ಶತಮಾನದ ೧೨ ನೇ ವರ್ಷವೂ ಆಗಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ವರ್ಷವನ್ನು 'ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ವರ್ಷ' ಎಂದು ಘೋಷಿಸಿದೆ. ಈ ವರ್ಷವನ್ನು ಸರ್ವರಿಗೂ ಸುಸ್ಥಿರ ಶಕ್ತಿಮೂಲಗಳ ಅಂತಾರಾಷ್ಟ್ರೀಯ ವರ್ಷ ಎಂದೂ ಆಚರಿಸಲಾಗುವುದು. === ಈ ವರ್ಷದ ಪ್ರಮುಖ ಹಬ್ಬಗಳು/ರಜದಿನಗಳು === ಮಾರ್ಚ್ ೮ - ಹೋಳಿಹಬ್ಬ ಏಪ್ರಿಲ್ ೧ - ರಾಮನವಮಿ ಏಪ್ರಿಲ್ ೬- ಗುಡ್ ಫ್ರೈಡೇ ಮತ್ತು ಹನುಮಜಯಂತಿ ಜುಲೈ ೨೦- ರಮಜಾನ್ ಆರಂಭ ಆಗಸ್ಟ್ ೨ - ರಕ್ಷಾಬಂಧನ ಆಗಸ್ಟ್ ೧೦- ಶ್ರೀಕೃಷ್ಣ ಜನ್ಮಾಷ್ಟಮಿ ಅಗಸ್ಟ್ ೧೯ - ಈದ್ ಉಲ್ ಫಿತ್ರ್ ಅಕ್ಟೋಬರ್ ೨೪- ವಿಜಯದಶಮಿ ನವೆಂಬರ್ ೧ - ಕನ್ನಡ ರಾಜ್ಯೋತ್ಸವ ನವೆಂಬರ್ ೧೩ - ದೀಪಾವಳಿ ಡಿಸೆಂಬರ್ ೨೫ - ಕ್ರಿಸ್ಮಸ್