ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯರ ಚರ್ಚೆ-ಗದ್ದಲದಿಂದಾಗಿ ನಾಲ್ಕನೇ ದಿನದ ವಿಧಾನಸಭೆಯ ಕಲಾಪವನ್ನು ಯು.ಟಿ.ಖಾದರ್ ಅವರು ಸೋಮವಾರಕ್ಕೆ ಮುಂದೂಡಿದ್ದಾರೆ.ಕಲಾಪವನ್ನು ಸೋಮವಾರ ಬೆಳಗ್ಗೆ10ಗಂಟೆಗೆ  ಮುಂದೂಡಲಾಗಿದ್ದು,  ಪ್ರತಿಪಕ್ಷಗಳ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನ ಕಲಾಪದಲ್ಲಿ ಲಿಖಿತ ರೂಪದ ಪ್ರತಿಯನ್ನು ಓದುವ ಮೂಲಕ ಪ್ರತಿಪಕ್ಷಗಳಿಗೆ ಉತ್ತರ ನೀಡುತ್ತಿದ್ದರು.ಈ ವೇಳೆ ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಸದನದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸಿದರು. ಗದ್ದಲದಿಂದಾಗಿ ಸದನದ ಕಲಾಪವು ಮುಂದೂಡಿಕೆಯಾಗಿದೆ.