ಸಾಂದರ್ಭಿಕ ಚಿತ್ರ  ಚಿಕ್ಕಮಗಳೂರು : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 6 ತಾಲ್ಲೂಕುಗಳ ಅಂಗನವಾಡಿ, ಶಾಲೆ, ಪ್ರೌಢ ಶಾಲೆಗಳಿಗೆ ನಾಳೆ(ಜು.16)ರಂದು ರಜೆ ಘೋಷಿಸಲಾಗಿದೆ. ಅದರಂತೆ ಕಡೂರು, ತರೀಕೆರೆ ಹೊರತುಪಡಿಸಿ ಚಿಕ್ಕಮಗಳೂರು, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳಲ್ಲಿ  ರಜೆ ನೀಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್  ಆದೇಶ ಹೊರಡಿಸಿದ್ದಾರೆ.