PC :  @ICCಬೆಂಗಳೂರು : ಐಸಿಸಿ ಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಭಾರತ ತಂಡ, ತರಬೇತುದಾರ ರಾಹುಲ್ ಡ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಅವರಿಗೆ ವಿಧಾನಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.  ಸೋಮವಾರ ಭೋಜನ ವಿರಾಮದ ಬಳಿಕ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಭಾರತ ತಂಡವು 11 ವರ್ಷಗಳ ಬಳಿಕ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಗೆದ್ದಿರುವುದು ಅಭಿನಂದನಾರ್ಹ ಎಂದರು.   ರಾಜ್ಯದ ಹೆಮ್ಮೆಯ ಪುತ್ರ, ಕ್ರಿಕೆಟ್ ಲೋಕದಲ್ಲಿ ‘ಗೋಡೆ’ ಎಂದೆ ಖ್ಯಾತಿ ಹೊಂದಿರುವ ರಾಹುಲ್ ಡ್ರಾವಿಡ್ ಅವರ ಸಾರಥ್ಯದಲ್ಲಿ, ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಈ ಸಾಧನೆ ಮಾಡಲಾಗಿದೆ. ಆದುದರಿಂದ, ರಾಜ್ಯದ ಜನತೆಯ ಪರವಾಗಿ ಈ ಸದನದ ಮೂಲಕ ಅವರೆಲ್ಲರಿಗೂ ಅಭಿನಂದನೆ ಹಾಗೂ ಶುಭಾಶಯ ತಿಳಿಸುತ್ತಿರುವುದಾಗಿ ಅವರು ಪ್ರಕಟಿಸಿದರು.  