ಬೆಂಗಳೂರು, ಜು.12: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಆಯೇಷಾ ಖಾನಮ್ ಅವರುಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭ ಡಿಸಿಎಂ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್  ಉಪಸ್ಥಿತರಿದ್ದರು.ಗುರುವಾರ ವಿಶ್ವೇಶ್ವರಯ್ಯ ಮುಖ್ಯ ಗೋಪುರ(ಪೋಡಿಯಂ ಬ್ಲಾಕ್)ದಲ್ಲಿರುವ ಮಾಧ್ಯಮ ಅಕಾಡಮಿ ಕಚೇರಿಯಲ್ಲಿ ಆಯೇಷಾ ಖಾನಂ ಅವರು ಅಧಿಕಾರ ಸ್ವೀಕರಿಸಿದರು.  