Photo : ಯಡಿಯೂರಪ್ಪ( PTI )ಬೆಂಗಳೂರು : “ಯಡಿಯೂರಪ್ಪ ಪರವಾಗಿ ಯಾರೋ ಬಂದಿದ್ದರು. ಅಮ್ಮ ಮತ್ತು ತಂಗಿಯನ್ನು ಕಾರಿನಲ್ಲಿ ಯಡಿಯೂರಪ್ಪ ಮನೆಗೆ ಕರೆದುಕೊಂಡು ಹೋದರು” ಎಂದು ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯ ಸಹೋದರ ಹೇಳಿದ್ದಾರೆ. Thenewsminute ಗೆ ನೀಡಿರುವ ವೀಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯ ಸಹೋದರ, ” ಯಡಿಯೂರಪ್ಪ ಮನೆಯಲ್ಲಿ ಅಮ್ಮನ ಮತ್ತು ತಂಗಿಯ ಫೋನ್‌ ಕಸಿದುಕೊಂಡು ಫೇಸ್‌ ಬುಕ್‌ ನಲ್ಲಿ ಹಾಕಿದ್ದ ವಿಡಿಯೋ ಡಿಲೀಟ್‌ ಮಾಡಿಸಿದರು. ಇದನ್ನು ಮುಂದೆ ತೆಗೆದುಕೊಂಡು ಹೋದರೆ ನಿಮಗೇ ಸಮಸ್ಯೆಯಾಗುತ್ತದೆ. ಸರಿ ಇರವುದಿಲ್ಲ ಎಂದು ಬೆದರಿಕೆ ಹಾಕಿದ್ದರು” ಎಂದು ಹೇಳಿಕೊಂಡಿದ್ದಾರೆ. “ನನ್ನ ಸೋದರಳಿಯ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಅದರ ಬಗ್ಗೆ ದೂರು ಕೊಟ್ಟಿದೇವೆ. 2015ರಲ್ಲಿ ಅಮ್ಮ ಮೊದಲು ದೂರು ನೀಡಿದ್ದರು. ಈ ಬಗ್ಗೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಆಗ ನನ್ನ ತಂಗಿಗೆ 9 ವರ್ಷ ವಯಸ್ಸಾಗಿತ್ತು. ನಮಗೆ ಅಂದಿನಿಂದ ಸಮಸ್ಯೆ ಪ್ರಾರಂಭವಾಯಿತು” ಎಂದರು.“ನಾವು ಹಲವು ಪೊಲೀಸ್‌ ಅಧಿಕಾರಿಗಳ ಬಳಿಗೆ ಹೋಗಿದ್ದೇವೆ. ಬಾಸ್ಕರ್‌ ರಾವ್‌, ಅಲೋಕ್‌ ಕುಮಾರ್‌ ಸೇರಿದಂತೆ ಉಗ್ರಪ್ಪ ರಂತರ ದೊಡ್ಡ ವ್ಯಕ್ತಿಗಳಿಂದ ಹಿಡಿದು ಸಣ್ಣ ಇನ್ಸ್‌ಪೆಕ್ಟರ್‌ ಬಳಿಗೂ ಹೋಗಿದ್ದೇವೆ. ಆದರೆ ಇದುವರೆಗೂ ನಮಗೆ ನ್ಯಾಯ ಸಿಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.“ನಮಗೆ ಯಾರೂ ಸಹಾಯ ಮಾಡುತ್ತಿರಲಿಲ್ಲ. ನಮ್ಮ ಅಮ್ಮ ಲಿಂಗಾಯತ ಸಮುದದಾಯಕ್ಕೆ ಸೇರಿದವರು. ಯಡಿಯೂರಪ್ಪನವರೂ ಅದೇ ಸಮುದಾಯದ ದೊಡ್ಡ ನಾಯಕರಾಗಿದ್ದರು. ಅದಕ್ಕಾಗಿ ಈ ಪ್ರಕರಣ ವಿಚಾರವಾಗಿ ಅವರ ಮನೆಗೆ ಹೋಗಿದ್ದರು” ಎಂದು ಪ್ರಕರಣದ ಕುರಿತು ಅವರು ವಿವರಿಸಿದರು. “53 ದೂರುಗಳ ಪಟ್ಟಿಯನ್ನು ಸರಿಯಾಗಿ ಓದಿ. ಅದರಲ್ಲಿ 3 ಅಥವಾ 4 ಮಾತ್ರ ದೂರುಗಳು. ಮಿಕ್ಕಿದ್ದೆಲ್ಲವು  ಪಿಟಿಷನ್(ಮನವಿ)ಗಳು. ಪೊಲೀಸರು ಯಾಕೆ ಕ್ರಮ ತಗೊಂಡಿಲ್ಲ ಅಂತ ಪದೇ ಪದೇ ಪಿಟಿಷನ್‌(ಮನವಿ) ಹಾಕಿದ್ದೆವು” ಎಂದು ಅಪ್ರಾಪ್ತೆಯ ಸಹೋದರ ಹೇಳಿದ್ದಾರೆ.ವೀಡಿಯೊ ಲಿಂಕ್ ಗಾಗಿ…..