ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ 2023ರ ಸಾಹಿತ್ಯ ರತ್ನ, ಯುವ ಸಾಹಿತ್ಯ ರತ್ನ, ಪುಸ್ತಕ ರತ್ನ, ಮುದ್ರಣ ರತ್ನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಅವರು ಪ್ರತಿಷ್ಠಿತ ‘ಸಾಹಿತ್ಯ ರತ್ನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಲೇಖಕಿ ರಂಜಿನಿ ರಾಘವನ್, ‘ಪುಸ್ತಕ ರತ್ನ’-ಪ್ರಕಾಶಕ ಅಭಿರುಚಿ ಗಣೇಶ್, ‘ಮುದ್ರಣ ರತ್ನ’ ಪ್ರಶಸ್ತಿಗೆ ಟಂಕಸಾಲಿ ಎಸ್.ನಾಗರಾಜು ಪಾತ್ರರಾಗಿದ್ದಾರೆ. ಎಲ್ಲ ಪ್ರಶಸ್ತಿಗಳು ಸ್ಮರಣ ಸಂಚಿಕೆ, ಪ್ರಮಾಣ ಪತ್ರ ಹಾಗೂ 10 ಸಾವಿರ ರೂ.ನಗದನ್ನು ಹೊಂದಿವೆ. ಜುಲೈ 6ರಂದು ನಗರದ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.