ಬೆಂಗಳೂರು : ಮಹಿಳೆ ಅಪಹರಣ ಪ್ರಕರಣ ಸಂಬಂಧ ಜಾಮೀನಿನ ಮೇಲೆ ಜೈಲಿನಿಂದ ಬಿಡೆಗಡೆ ಆಗಿರುವ ಜೆಡಿಎಸ್ ಎಚ್.ಡಿ.ರೇವಣ್ಣ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, ಹೈಕೋರ್ಟಿಗೆ ಹಾಜರಾಗುವಂತೆ ಸೂಚಿಸಲಾಗಿದೆ.  ಹೊಳೆನರಸೀಪುರ ಪೊಲೀಸ್ ಠಾಣಾ ಸಿಬ್ಬಂದಿ ಹರದನಹಳ್ಳಿ ಮನೆಯಲ್ಲಿ ರೇವಣ್ಣಗೆ ಹೈಕೋರ್ಟ್‍ನ ನೊಟೀಸ್ ಮುಟ್ಟಿಸಿದ್ದು, ಈ ನೋಟಿಸ್ ತಲುಪಿದ ಐದು ದಿನದೊಳಗೆ ಹಾಜರಾಜಗಲು ಕೋರ್ಟ್ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.  ಮೈಸೂರಿನ ಕೆಆರ್ ಪೇಟೆಯಲ್ಲಿ ದಾಖಲಾಗಿರುವ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್‍ಡಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿತ್ತು. ಆದರೆ, ರೇವಣ್ಣ ಅವರು ಜಾಮೀನು ಪಡೆದಿದ್ದರು. ಈ ಸಂಬಂಧ ಎಸ್‌ಐಟಿ ತನಿಖಾಧಿಕಾರಿಗಳು ಜಾಮೀನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ನೋಟಿಸ್ ಜಾರಿಯಾಗಿದೆ.   