ಹಾಸನ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಹಿನ್ನಲೆ ಬಿಜೆಪಿ ಮುಖಂಡ  ಹಾಗೂ ವಕೀಲ ದೇವರಾಜೇಗೌಡ ಅವರನ್ನು ಸೋಮವಾರ  ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್  ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡಗೆ ಮೇ.11ಕ್ಕೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ಕೊಡಿ ಎಂದು ಕೋರ್ಟ್‌ ಮೊರೆ ಹೋದ ಹಿನ್ನಲೆ ಇಂದು ಕೋರ್ಟ್‌ ದೇವರಾಜೇಗೌಡ ಅವರನ್ನು  ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.