ತೇಜಸ್ವಿ ಸೂರ್ಯ ,  ರೋಹನ್‌ ಬೋಪಣ್ಣ | PC : X \ Tejasvi_Surya‌ಬೆಂಗಳೂರು: ಎಪ್ರಿಲ್‌ 14ರಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ರನ್‌ 4 ನಮೋ ಅಭಿಯಾನದಲ್ಲಿ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಜೊತೆಗೆ ಭಾರತದ ಟೆನಿಸ್‌ ತಾರೆ ರೋಹನ್‌ ಬೋಪಣ್ಣ ಕೂಡ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಜಯನಗರ್‌ ಜಾಗುವರ್ಸ್‌ ಎಂಬ ಫಿಟ್ನೆಸ್‌ ಮತ್ತು ಕ್ರೀಡಾ ತರಬೇತಿ ಕೇಂದ್ರವು ತಂಡ ಪ್ರಧಾನಿ ಮೋದಿ ಬೆಂಬಲಾರ್ಥ ಆಯೋಜಿಸಿತ್ತು.ಈ ಸಂದರ್ಭ ಮಾತನಾಡಿದ ರೋಹನ್‌ ಬೋಪಣ್ಣ ತಮಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತೀವ ಸಂತೋಷವಾಗಿದೆ ಎಂದು ಹೇಳಿದರು.ತೇಜಸ್ವಿ ಸೂರ್ಯ ಮಾತನಾಡಿ ಎಲ್ಲರೂ ಎಪ್ರಿಲ್‌ 26ರಂದು ಚುನಾವಣೆಗೆ ಇರುವ ರಜೆಯನ್ನು ಪ್ರವಾಸಕ್ಕೆ ತೆರಳಲು ಬಳಸದೆ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ಹೇಳಿದರು.ರನ್‌ 4 ನಮೋ ಬೆಂಗಳೂರಿನ ಆರ್‌ವಿ ಟೀಚರ್ಸ್‌ ಕಾಲೇಜಿನಿಂದ ಆರಂಭಗೊಂಡು ಲಾಲ್‌ ಭಾಗ್‌ ವೆಸ್ಟ್‌ ಗೇಟ್‌ ಸಮೀಪ ಕೊನೆಗೊಂಡಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಕ್ರಿಕೆಟ್‌ ತಾರೆ ಸಹನಾ ಪವಾರ್‌ ಕೂಡ ಪಾಲ್ಗೊಂಡರು.The response to #Run4NaMo in Bengaluru South showcases the overwhelming support for PM Sri @narendramodi Ji's visionary leadership. Namma Bengaluru is ready to back #ModiKiGuarantee & re-elect him for a 3rd term. Highlights from the run!@rohanbopanna pic.twitter.com/lmhO0sVcpF 