ಬೆಂಗಳೂರು: ತೆರಿಗೆ ವಿಚಾರದಲ್ಲಿ ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ  @karnatabala (ಕರ್ನಾಟ ಬಲ) ಟ್ವಿಟರ್ ಹ್ಯಾಂಡಲ್‌ನಲ್ಲಿ ಫೆ 14ರಂದು ಸಂಜೆ 6 ಗಂಟೆಗೆ ನೇರ ಮಾತುಕತೆ ಹಮ್ಮಿಕೊಳ್ಳಲಾಗಿದೆ.ಸಿಎಂ ಸಿದ್ದರಾಮಯ್ಯನವರ ಅಧಿಕೃತ ಫೇಸ್‌ಬುಕ್ ಪುಟ ಸೇರಿದಂತೆ ಹಲವು ಕನ್ನಡಪರ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಖಾತೆಗಳಲ್ಲಿಯೂ ಈ ಮಾತುಕತೆ ನೇರಪ್ರಸಾರವಾಗಲಿದೆ. ಕನ್ನಡ ಪರ ಕಾರ್ಯಕರ್ತರ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಉತ್ತರಿಸಲಿದ್ದಾರೆ ಎಂದು ಆಯೋಜಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  