ಹೊಸದಿಲ್ಲಿ:  ಮುಂಬರುವ ಸಾರ್ವತ್ರಿಕ ಚುನಾವಣೆಗೆ  ಭಾರತೀಯ ಜನತಾ ಪಕ್ಷವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು, ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್  ಹಾಗೂ ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ  ಅವರನ್ನು ನೇಮಕ ಮಾಡಿ ಆದೇಶಿಸಿದೆ.ಉತ್ತರ ಪ್ರದೇಶಕ್ಕೆ ಬೈಜಯಂತ್ ಪಾಂಡಾ, ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನ, ಕೇರಳಕ್ಕೆ ಪ್ರಕಾಶ್‌ ಜಾವಡೇಕರ್‌ ಹಾಗೂ ಬಿಹಾರಕ್ಕೆ ವಿನೋದ್ ತಾವ್ಡೆ  ಉಸ್ತುವಾರಿಯಾಗಲಿದ್ದಾರೆ.ಜಮ್ಮು ಕಾಶ್ಮೀರಕ್ಕೆ ತರುಣ್‌ ಚುಗ್‌, ಜಾರ್ಖಂಡ್‌ ಗೆ ಸಂಸದ ಲಕ್ಷ್ಮೀಕಾಂತ್‌ ಬಾಜಪೇಯಿ, ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಅರವಿಂದ್‌ ಮೆನನ್‌, ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ,ಮಧ್ಯಪ್ರದೇಶಕ್ಕೆ ಮಹೇಂದ್ರ ಕುಮಾರ್ ಸಿಂಗ್, ಒಡಿಶಾಕ್ಕೆ ವಿಜಯಪಾಲ್ ಸಿಂಗ್ ತೋಮರ್,ಹರಿಯಾಣಕ್ಕೆ ಬಿಪ್ಲಬ್ ಕುಮಾರ್ ದೇವ್ ಹಾಗೂ ಪಶ್ಚಿಮ ಬಂಗಾಳಕ್ಕೆ ಮಂಗಲ್ ಪಾಂಡೆ ಇವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. 