ಗದಗ: ಇತ್ತೀಚಿಗೆ ವಿದ್ಯುತ್ ಅವಘಡದಿಂದಾಗಿ ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬದವರಿಗೆ ಸ್ಯಾಂಡಲ್‌ ವುಡ್‌ ನಟ ಯಶ್ ಟೀಮ್ ಕಡೆಯಿಂದ ಪರಿಹಾರ ವಿತರಣೆ ಮಾಡಲಾಗಿದೆ.   ನಟ ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಇಂದು ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದಾರೆ.ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜ.7ರ ರಾತ್ರಿ ದುರಂತ ಸಂಭವಿಸಿತ್ತು. ಯಶ್ ಹುಟ್ಟುಹಬ್ಬದ ಕಟೌಟ್ ನಿಲ್ಲಿಸಲು ಮುಂದಾಗಿದ್ದ ಮುರಳಿ, ನವೀನ ಹಾಗೂ ಹನಮಂತ ಎಂಬುವರು ಪ್ರಾಣ ಕಳೆದುಕೊಂಡಿದ್ದರು. ಈ ಮೂವರ ಕುಟುಂಬಕ್ಕೂ ತಲಾ 5 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಘಟನೆಯಲ್ಲಿ ಇತರೆ ಮೂವರು ಯುವಕರಿಗೆ ಗಾಯಗೊಂಡಿದ್ದರು.  