ಬೆಂಗಳೂರು: ಕಮಲ್ ಪಂತ್, ಅಲೋಕ್ ಕುಮಾರ್ ಸಹಿತ  37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.► ಕಮಲ್ ಪಂತ್ – ಡಿಜಿಪಿ, ನೇಮಕಾತಿ ವಿಭಾಗ► ಅಲೋಕ್ ಕುಮಾರ್ – ವಿಶೇಷ ಆಯುಕ್ತ, ರಸ್ತೆ ಸುರಕ್ಷತಾ ವಿಭಾಗ► ಸೀಮಂತ್ ಕುಮಾರ್ ಸಿಂಗ್ – ಎಡಿಜಿಪಿ, ಬಿಎಂಟಿಎಫ್► ಹರಿಶೇಖರನ್ –ಎಡಿಜಿಪಿ, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್► ನಂಜುಂಡಸ್ವಾಮಿ – ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ► ಚಂದ್ರಗುಪ್ತ – ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಸಿಸಿಬಿ► ತ್ಯಾಗರಾಜನ್ – ಐಜಿಪಿ, ಪೂರ್ವ ವಲಯ► ಅಮಿತ್ ಸಿಂಗ್ – ಐಜಿಪಿ, ಪಶ್ಚಿಮ ವಲಯ► ರವಿಕುಮಾರ್ – ಡಿಐಜಿ, ಗುಪ್ತಚರ ಇಲಾಖೆ