ಬಾಗಲಕೋಟೆ: ಸಂಸತ್ ಭದ್ರತಾ ವೈಫಲ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ನಿವೃತ್ತ ಡಿವೈಎಸ್‌ಪಿ ಅವರ ಮಗ ಸಾಯಿ ಕೃಷ್ಣನನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹೊಗೆ ಬಾಂಬ್‌ ದಾಳಿಯ ಆರೋಪಿಯಾಗಿರುವ ಮನೋರಂಜನ್ ಸ್ನೇಹಿತ ಸಾಯಿ ಕೃಷ್ಣ ಬೆಂಗಳೂರು ಬಿಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಒಟ್ಟಿಗೆ ಇದ್ದರು. ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರನ್ನು ಮನೋರಂಜನ್ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಸಾಯಿಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ನವನಗರ ಠಾಣೆಯಲ್ಲಿ ಕೆಲ ಕಾಲ ವಿಚಾರಣೆ ನಡೆಸಿ ತಡರಾತ್ರಿ ದಿಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.ಸಾಯಿಕೃಷ್ಣನನ್ನು ದಿಲ್ಲಿ ಪೊಲೀಸರು ವಶಕ್ಕೆ‌ಪಡೆದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ  ಅವರ ಸಹೋದರಿ ಸ್ಪಂದನಾ,ನನ್ನ ತಮ್ಮ ತುಂಬಾ ಮುಗ್ದಅವನು ನಿರ್ದೋಷಿಯಾಗಿ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಾಯಿಕೃಷ್ಣ ಯಾರು?: ವಿದ್ಯಾಗಿರಿಯ 11ನೇ ಕ್ರಾಸ್ ನಿವಾಸಿಯಾಗಿರುವ ಸಾಯಿಕೃಷ್ಣ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಸೀನಿಯರ್‌ ಎಂಜಿನಿಯರ್‌ ಆಗಿದ್ದಾನೆ. ವರ್ಕ್ ಫ್ರಂ ಹೋಂ ಮಾಡುತ್ತಿದ್ದರಿಂದ ಮನೆಯಿಂದ ಕೆಲಸ ಮಾಡುತ್ತಿದ್ದ.