ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಜನಪ್ರಿಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಲ್ಲಿ ಜ.16 ರಿಂದ ಹೊಸ ಆಹಾರ ಮೆನುವಿನ ಪ್ರಕಾರ ಆಹಾರ ವಿತರಣೆಯಾಗಲಿದೆಈ ಸಂಬಂಧ ʼಎಕ್ಸ್ʼ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ʼಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಮೆನು ಸೇರ್ಪಡೆಯಾಗಿದೆ. ಶುಚಿ-ರುಚಿಯಾದ ಆಹಾರಗಳು ಎಂದಿನಂತೆ ನಿಮ್ಮ ಇಂದಿರಾ ಕ್ಯಾಂಟೀನ್‌ನಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.   ಇಂದಿರಾ ಕ್ಯಾಂಟೀನ್ ಹೊಸ ಆಹಾರದ ಮೆನು ಈ ಕೆಳಗಿನಂತಿವೆ  ಉಪಹಾರ ( ಬೆಳಿಗ್ಗೆ 7 ರಿಂದ 10 ಗಂಟೆ ವರೆಗೆ) ಪ್ಲೇಟ್ ಗೆ ರೂ.5► ಇಡ್ಲಿ ಸಾಂಬಾರ್  ► ಇಡ್ಲಿ ಚಟ್ನಿ   ► ವೆಜ್ ಪುಲಾವ್  ರಾಯಿತಾ  ► ಬಿಸಿಬೇಳೆ ಬಾತ್  ಬೂಂದಿ  ► ಖಾರಾಬಾತ್  ಚಟ್ನಿ   ► ಪೊಂಗಲ್‌ ಚಟ್ನಿ  ► ಕೇಸರಿಬಾತ್  ► ಬ್ರೆಡ್ ಜಾಮ್  ► ಮಂಗಳೂರು ಬನ್ಸ್  ಮಧ್ಯಾಹ್ನ ಊಟ ( 1 ರಿಂದ 3 ಗಂಟೆ ವರೆಗೆ ) ಪ್ಲೇಟ್‌ಗೆ ರೂ. 10► ಅನ್ನ, ತರಕಾರಿ ಸಾಂಬಾರು,  ಖೀರು  ► ಅನ್ನ , ತರಕಾರಿ ಸಾಂಬಾರು,  ರಾಯಿತಾ  ► ಅನ್ನ, ತರಕಾರಿ ಸಾಂಬಾರು, ಮೊಸರನ್ನ  ► ರಾಗಿ ಮುದ್ದೆ, ಸೊಪ್ಪಿನ ಸಾರು, ಖೀರು  ► ಚಪಾತಿ, ಸಾಗು, ಖೀರು  ರಾತ್ರಿ ಊಟ (ಸಂಜೆ 7.30ರಿಂದ ರಾತ್ರಿ 9 ಗಂಟೆವರೆಗೆ ) ಪ್ಲೇಟ್‌ಗೆ ರೂ. 10► ಅನ್ನ,  ತರಕಾರಿ ಸಾಂಬಾರು  ► ಅನ್ನ ,  ತರಕಾರಿ ಸಾಂಬಾರು, ರಾಯಿತಾ  ► ರಾಗಿ ಮುದ್ದೆ,  ಸೊಪ್ಪಿನ ಸಾರು  ► ಚಪಾತಿ , ವೆಜ್ ಗ್ರೇವಿ  ವಿಶೇಷ : ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ ದೊರೆಯಲಿದೆ ಎಂದು ತಿಳಿಸಿದ್ದಾರೆ.