ಬೆಂಗಳೂರು: ಸಮಾನತಾವಾದಿಗಳಾದ ನಮಗೆ ಗಾಂಧಿವಾದ ಮತ್ತು ಸಾವರ್ಕರ್‌ ವಾದ ಎರಡೂ ಶತ್ರುಗಳು ಎಂದು ನಟ ಚೇತನ್‌ ಅಹಿಂಸಾ ತಮ್ಮ ʼಎಕ್ಸ್‌ʼ  ನಲ್ಲಿ ಬರೆದುಕೊಂಡಿದ್ದಾರೆ.ಈ ಬಗ್ಗೆ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಅವರು, ʼಸಮಾನತಾವಾದಿಗಳು (ಅಂಬೇಡ್ಕರ್ ಮತ್ತು ಪೆರಿಯಾರ್ ವಾದಿಗಳು) ನಮ್ಮ ಮತ್ತು ಅಸಮಾನತೆಯ ಶಕ್ತಿಗಳ ನಡುವೆ ಗೋಡೆಗಳನ್ನು ನಿರ್ಮಿಸಬೇಕು. ಆ ಅಸಮಾನತೆಯ ಶಕ್ತಿಗಳು  ಗಾಂಧಿವಾದ ಮತ್ತು ಸಾವರ್ಕರ್‌ ವಾದʼ ಎಂದು ಅವರು ಹೇಳಿದ್ದಾರೆ."ಗಾಂಧಿವಾದಿಗಳಿಗೆ ಸಾವರ್ಕರ್‌ ವಾದ ಶತ್ರು, ಸಮಾನತಾವಾದಿಗಳಾದ ನಮಗೆ ಗಾಂಧಿವಾದ ಮತ್ತು ಸಾವರ್ಕರ್‌ ವಾದ ಎರಡೂ ಶತ್ರುಗಳು ಎಂದ ಅವರು, ಗಾಂಧಿವಾದವು ಹಿಂದಿನದು (ಪಾಸ್ಟ್) ಸಾವರ್ಕರ್‌ ವಾದ ಪ್ರಸ್ತುತ (ಪ್ರೆಸೆಂಟ್)  ಅಂಬೇಡ್ಕರ್-ಪೆರಿಯಾರ್ ವಾದ ನಮ್ಮ ಭವಿಷ್ಯ (ಪ್ಯೂಚರ್)  ಜೈ ಭೀಮ್" ಎಂದು ಬರೆದುಕೊಂಡಿದ್ದಾರೆ. 