ಬೆಂಗಳೂರು: ಡಾ. ಕೆ. ಮಧುಕರ ಶೆಟ್ಟಿ (1971-2018) ಅವರ 52 ನೇ ಜನ್ಮ ಜಯಂತಿಯ ಅಂಗವಾಗಿ ʼಪುಷ್ಪ ನಮನʼ ಕಾರ್ಯಕ್ರಮವು ಬೆಂಗಳೂರಿನ ಜ್ಞಾನ ಭಾರತಿ ವಿಶ್ವ ವಿದ್ಯಾಲಯದ ಎಚ್‌.ಎನ್‌ ಸಭಾಂಗಣದಲ್ಲಿ ನಡೆಯಲಿದೆ.ಡಾ. ಕೆ. ಮಧುಕರ ಶೆಟ್ಟಿ ಅವರ ಗೆಳೆಯರ ಬಳಗದ ವತಿಯಂದ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕುವೆಂಪು ವಿ.ವಿಯ ಪ್ರಾಧ್ಯಾಪಕ ಪ್ರೊ. ದತ್ತಾತ್ರೇಯ.ಎಂ ಹಾಗೂ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅರುಣ್.‌ ಜೆ ಚಕ್ರವರ್ತಿ IPS ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಕೇಡರ್‌ನ 1999 ಬ್ಯಾಚ್‌ನ  ಪೊಲೀಸ್  ಅಧಿಕಾರಿಯಾಗಿದ್ದ ಡಾ. ಕೆ. ಮಧುಕರ ಶೆಟ್ಟಿ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ಕೆಲಸ ಮಾಡಿದ್ದರಿಂದ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದರು. 