ಚಿರತೆ ದಾಳಿಗೆ 17 ಕುರಿ, 14 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ.ಮಲ್ಲೇಶ್ವರ ಗ್ರಾಮದ ಚಂದ್ರು, ಬಸವರಾಜು, ಮಂಜು, ಲಕ್ಷ್ಮಣ್ ಎಂಬವರಿಗೆ ಸೇರಿದ ಕುರಿಗಳನ್ನು ಸುಶೀಲಮ್ಮ ಎಂಬವರ ತೋಟದ ಮನೆಯಲ್ಲಿ ಕಟ್ಟಿ ಹಾಕಲಾಗಿತ್ತು.ಕುರಿಗಳ ಸಾವಿನಿಂದಾಗಿ ಸುಮಾರು 4 ಲಕ್ಷ ರೂ. ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಪಶು ವೈದ್ಯ ಉಮೇಶ್ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. 