ಬೆಂಗಳೂರು, ಡಿ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್ಸಾರ್ಟಿಸಿ) ಅನುಷ್ಠಾನಗೊಳಿಸಿರುವ ವಾಹನಗಳ ಪುನಶ್ಚೇತನ ಉಪಕ್ರಮಕ್ಕೆ ವಲ್ರ್ಡ್ ಸಸ್ಟೈನ್‍ಬಿಲಿಟಿ ಕಾಂಗ್ರೆಸ್ ಸ್ಥಾಪಿಸಿರುವ ಗ್ಲೋಬಲ್ ಸಸ್ಟೈನ್‍ಬಿಲಿಟಿ ಲೀಡರ್‌ ಶಿಪ್ ಪ್ರಶಸ್ತಿಯು ದೊರೆತಿದೆ.ಗುರುವಾರದಂದು ಮಾರಿಷಸ್‍ನಲ್ಲಿ ನಡೆದ 10ನೇ ಆವೃತ್ತಿಯ ಸಮಾವೇಶದಲ್ಲಿ ಕೆಎಸ್ಸಾರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಲ್ರ್ಡ್ ಸಸ್ಟೈನ್‍ಬಿಲಿಟಿ ಕಾಂಗ್ರೆಸ್ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿದೆ.   ಸುಸ್ಥಿರ ನಾಯಕತ್ವ ಸಂಸ್ಥೆಗಳು, ಎನ್‍ಜಿಓಗಳು, ಸಾರ್ವಜನಿಕ ಹಿತಾಸಕ್ತಿ ಗುಂಪುಗಳು ಮತ್ತು ಸರಕಾರಿ ಸಂಸ್ಥೆಗಳನ್ನು ಒಟ್ಟು ಗೂಡಿಸಿ ಸುಸ್ಥಿರ ಪದ್ಧತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಯಾಗಿದೆ.   