ಬೆಳಗಾವಿ:  ಕೈಗಾರಿಕಾ ವಸಾಹತುಗಳಲ್ಲಿ ನಿವೇಶನಗಳನ್ನು ಮಹಿಳಾ ಸ್ವಸಹಾಯ ಸಂಘದವರಿಗೆ ಹಂಚಿಕೆ ಸಂಬಂಧ ಸೂಕ್ತ ಪ್ರಸ್ತಾವ ಬಂದಲ್ಲಿ ಪರಿಗಣಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದ್ದಾರೆ.  ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದಿಂದ ಸ್ಥಾಪಿಸಿರುವ ಕೈಗಾರಿಕಾ ಅರಿಕಾ ವಸಾಹತುವಿನಲ್ಲಿ ಮಳಿಗೆ, ನಿವೇಶನಗಳನ್ನು ಕೈಗಾರಿಕಾ ಉತ್ಪನ್ನಗಳಳನ್ನು ತಯಾರಿಸುವ ಕೈಗಾರಿಕೋದ್ಯಮಿಗಳಿಗೆ ಮಾತ್ರ ಹಂಚಿಕೆ ಮಾಡಲು ಅವಕಾಶವಿದೆ ಎಂದರು.  ಈಗಿನ ನಿಯಮಗಳಲ್ಲಿ ಮಹಿಳಾ ಕೈಗಾರಿಕೋದ್ಯಮಿಗಳಿಗೆ ನಿವೇಶನ, ಮಳಿಗೆ ಹಂಚಿಕೆ ಮಾಡಲು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಮಹಿಳಾ ಸ್ವ-ಸಹಾಯ ಸಂಘದವರಿಗೆ ಮೀಸಲಾತಿ ಇರುವುದಿಲ್ಲ. ನಿಗಮವು ಹೊರಡಿಸುವ ಪ್ರಕಟನೆ ಹೊರತಾಗಿಯೂ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗಾಗಿ ನಿವೇಶನ, ಮಳಿಗೆ ಹಂಚಿಕೆ ಮಾಡಲು ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ನಿ ಹಂಚಿಕೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.  