ಬೆಂಗಳೂರು: ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ. ಆದ್ದರಿಂದ  ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ನಟ ಚೇತನ್‌ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಈ ಸಂಬಂಧ ಎಕ್ಸ್‌ ನಲ್ಲಿ ಬರೆದುಕೊಂಡಿರುವ ಅವರು, " ಗಾಂಧಿಯವರ 'ಧಾರ್ಮಿಕ ಸಾಮರಸ್ಯ' ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ (ಆರ್ಟಿಕಲ್ 25); ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ - ಅಂದರೆ ಧರ್ಮದಿಂದ ದೂರ ಇರುವುದಾಗಿದೆ, ಹಾಗೂ ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ ಆದ್ದರಿಂದ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ವಿವಾದಾತ್ಮಕ ಪೋಸ್ಟ್ ಯೊಂದನ್ನು ಹಂಚಿಕೊಂಡಿದ್ದಾರೆ.‌Those who claim Gandhi’s ‘religious harmony’ is necessary today dont understand our ConstitutionPrivately, all have right to religion (Article 25); publicly, we’re secular, which means DISTANT from religion‘Religious harmony’ preserves inequalityGandhivada must be dismantld 