ಬೆಳಗಾವಿ: ಗುತ್ತಿಗೆದಾರರ ಸಂಕಷ್ಟ ದೂರ ಮಾಡಲು ಸರ್ಕಾರ  ಕ್ರಮ ವಹಿಸುತ್ತಿಲ್ಲ. ರಾಜ್ಯದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಬೇರೆ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.ಸದನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಯತ್ನಾಳ್‌,  ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಕಾಮಗಾರಿಗಳು ಕುಠಿತವಾಗಿದೆ. ನಮ್ಮ ಸರ್ಕಾರವನ್ನು ಪೇಟಿಎಂ ಸರ್ಕಾರ ಎಂದು ಹೇಳುತ್ತಿದ್ದರು. ಇದು ಪೇ ಸಿಎಂ ಸರ್ಕಾರ ಆಗಿದೆ. ಈ ಸರ್ಕಾರದಲ್ಲಿ ಪೇ ಸಿಎಂ, ಪೇ ಡಿಸಿಎಂ ಎಂಬ ದೊಡ್ಡ ಹಗರಣ ನಡೆದಿದೆ. ಸರ್ಕಾರದ ಕಮಿಷನ್ 80% ಕ್ಕೆ ಬಂದು‌ ನಿಂತಿದೆ ಎಂದು ವಾಗ್ದಾಳಿ ನಡೆಸಿದರು.ಯತ್ನಾಳ್ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದ್ದಾರೆ.