ಕಲಬುರಗಿ:  ವಕೀಲ ಈರಣ್ಣ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳನ್ನು ಉದನೂರು ಗ್ರಾಮದ ನಿವಾಸಿಗಳಾದ ನೀಲಕಂಠ ಪಾಟೀಲ್, ವಿಜಯಕುಮಾರ,  ಸಿದ್ದಣ್ಣಗೌಡ, ಸಿದ್ರಾಮ, ಅವ್ವಣ್ಣ ಹಾಗೂ ಗುರು ಎಂದು ಗುರುತಿಸಲಾಗಿದೆ.ಹತ್ಯೆಗೊಳಪಟ್ಟ  ನ್ಯಾಯವಾದಿ ಈರಣ್ಣ ಅವರ ಪತ್ನಿ ಗುಲಬರ್ಗಾ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.