ಹಾಸನ: ಒಂಟಿಸಲಗಗಳ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟಿದ್ದ   ಅರ್ಜುನ ಆನೆಯ ಅಂತ್ಯಸಂಸ್ಕಾರವನ್ನು  ಹಾಸನ ಜಿಲ್ಲೆಯ ದಬ್ಬಳ್ಳಿಕಟ್ಟೆಯಲ್ಲಿ ನೆರವೇರಿಸಲಾಯಿತು.ಸೋಮವಾರ ಸಕಲೇಶಪುರದ ಎಳಸೂರು ಬಳಿ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ  ವೇಳೆ ಕಾಡಾನೆಯೊಂದು ಕೊಂಬಿನಿಂದ ತಿವಿದಿದ್ದರಿಂದ ಅರ್ಜುನ ಆನೆ ಮೃತಪಟ್ಟಿತ್ತು.ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ನಾಯಕನಾಗಿ ಮುನ್ನಡೆಸುತ್ತಿದ್ದ ಅರ್ಜುನ ಆನೆಗೆ 63 ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರಿಸುತ್ತಿರಲಿಲ್ಲ. ಆದರೆ ಜಂಬೂ ಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತಿತ್ತು.