ಬೆಂಗಳೂರು,: ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ, ಪೌರಾಡಳಿತ ಇಲಾಖೆ ಸಚಿವ ರಹೀಮ್ ಖಾನ್, ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಸೇರಿದಂತೆ 51 ಮಂದಿ ಶಾಸಕರು, 21 ವಿಧಾನ ಸಭಾ ಸದಸ್ಯರು ಈವರೆಗೆ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಪ್ರಕಟನೆಯಲ್ಲಿ ತಿಳಿಸಿದೆ.   ಈ ಹಿಂದೆ ಸಚಿವರಾಗಿದ್ದ ಬಿ. ಶ್ರೀ ರಾಮುಲು, ಕೆ.ಸಿ. ನಾರಾಯಣಗೌಡ, ಅಂಗಾರ ಎಸ್ , ಮುರುಗೇಶ್ ನಿರಾಣಿ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಿಂದಿನ ಅವಧಿಯ 81 ಶಾಸಕರು ಲೋಕಾಯುಕ್ತಕ್ಕೆ ಆಸ್ತಿಯ ವಿವರಗಳನ್ನು ಸಲ್ಲಿಸಿಲ್ಲ. ಶರವಣ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಸಲೀಂ ಅಹಮದ್, ಡಾ. ತೇಜಸ್ವಿನಿ ಗೌಡ, ಎಚ್. ವಿಶ್ವನಾಥ್, ಪ್ರಕಾಶ್ ಕೆ. ರಾಥೋಡ್ ಸೇರಿದಂತೆ 21 ಮಂದಿ ವಿಧಾನ ಪರಿಷತ್ತು ಸದಸ್ಯರು ಆಸ್ತಿ ವಿವರವನ್ನು ಸಲ್ಲಿಸಿಲ್ಲ.  ಕೆ. ಮಾಡಾಲ್ ವಿರೂಪಾಕ್ಷಪ್ಪ, ಬಿ.ಎಸ್. ಯಡಿಯೂರಪ್ಪ, ಎನ್.ಎ. ಹಾರೀಸ್, ಡಾ. ಕೆ. ಅನ್ನದಾನಿ ಸಹಿತ ವಿಧಾನ ಪರಿಷತ್ತು ಅವಧಿ ಮುಗಿದಿರುವ ಪ್ರಾಣೇಶ್ ಎಂ.ಕೆ. ಕೂಡ ಆಸ್ತಿ ವಿವರವನ್ನು ಸಲ್ಲಿಸಿರಲಿಲ್ಲ.     ಜೂನ್ 30 ರೊಳಗೆ ಪ್ರತಿ ವರ್ಷ ಎಲ್ಲ ಜನಪ್ರತಿನಿಧಿಗಳಿಗೂ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೂ ಶಾಸಕರು ತಮ್ಮ ಆಸ್ತಿ ವಿವರವನ್ನು ಸಲ್ಲಿಸುತ್ತಿಲ್ಲ ಎಂದು ಲೋಕಾಯುಕ್ತ ಸ್ಪಷ್ಟಪಡಿಸಿದೆ.  