ಬೆಂಗಳೂರು: ಕೋರ್ಟ್ ನಲ್ಲಿ ಏನಾಯ್ತು ಅಂತ ಗೊತ್ತಿಲ್ಲ. ನನ್ನ ವಕೀಲರು ತಿಳಿಸಿದ ಬಳಿಕ ಮಾತನಾಡಬೇಕು ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.ಕೋರ್ಟ್ ಆದೇಶದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು  ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂಬಿ ಪಾಟೀಲ್ ಅವರು ಆಯೋಜಿಸಿರುವ ಟೆಕ್ ಸಮ್ಮಿಟ್ ನಲ್ಲಿ (Tech Summit) ಭಾಗವಹಿಸಿದ್ದೆ. ನನ್ನ ವಕೀಲರಿಂದ ಮಾಹಿತಿ ಪಡೆಯದೆ ಕೋರ್ಟ್ ವಿಚಾರಗಳನ್ನು ಮಾತಾಡುವುದು ಸರಿಯಲ್ಲ ಎಂದು ಹೇಳಿದರು.ಯತ್ನಾಳ್ ಸೇರಿದಂತೆ ಯಾರ್ಯಾರು ಏನು ಮಾತನಾಡಿದ್ದಾರೆ ಎಂದೆಲ್ಲಾ ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡುತ್ತೇನೆ. ನಾನೇನು ತಪ್ಪು ಮಾಡಿಲ್ಲ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದೇನೆ. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ತೊಂದರೆ ಕೊಡುತ್ತಾರೆಂದರೆ ಅದನ್ನು ನೋಡಲು ಭಗವಂತ ಇದ್ದಾನೆ. ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ. ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೂಡ ಕೋಟಿ ವಂದನೆ ಎಂದರು.