ಬೆಂಗಳೂರು: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಬಳಿಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ  ಕಾಂಗ್ರೆಸ್, "ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ" ಎಂದು X ಪೋಸ್ಟ್‌ ನಲ್ಲಿ ವ್ಯಂಗ್ಯವಾಡಿದೆ."ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ. ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ. ಅಶೋಕ್‌ ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ” ಎಂದು ಬಿಜೆಪಿ ಕಾಲೆಳೆದಿದೆ.“6 ತಿಂಗಳು ಸುದೀರ್ಘ ಸರ್ಕಸ್ ನಡೆಸಿದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅಳೆದು ತೂಗಲು ಸಮಯ ಸಿಗಲಿಲ್ಲವೇ” ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ.@RAshokaBJP ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ… pic.twitter.com/uzcsL4YsZu 