ಹಾಸನ, ನ.14: ಬೆಂಗಳೂರಿನ ಜೆಪಿ ನಗರದಲ್ಲಿರುವ ಅವರ ನಿವಾಸದ ದೀಪಾಲಂಕಾರಕ್ಕಾಗಿ ವಿದ್ಯುತ್ ಕಳವು  ಮಾಡಿರುವ ಆರೋಪಕ್ಕೆ  ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಈ ಘಟನೆ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿದ್ದ ಅವರು ಈ ವಿಚಾರದ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ನಮ್ಮಿಂದ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ' ಎಂದು ಹೇಳಿದರು. ‘ಈಗಾಗಲೇ ಕುಮಾರಣ್ಣ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ನಮ್ಮ ಮನೆಯ ಕೆಲ ಹುಡುಗರು ತಪ್ಪು ಮಾಡಿರಬಹುದು' ಎಂದು ಅವರು ಹೇಳಿದರು.  