ಸಾಂದರ್ಭಿಕ ಚಿತ್ರ.| Photo: PTIಹಾವೇರಿ: ರೈತರ ಬಯೋಮೆಟ್ರಿಕ್ ಹ್ಯಾಕ್ ಮಾಡಿ, ಅವರ ಬ್ಯಾಂಕ್‌ ಖಾತೆಯಿಂದ 1.24 ಲಕ್ಷ ರೂ. ಹಣ ದೋಚಿದ ಘಟನೆ ಹಾವೇರಿ ಜಿಲ್ಲೆಯ ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಹಂಸಭಾವಿ ಸಮೀಪದ ಬತ್ತಿಕೊಪ್ಪ ಗ್ರಾಮದ ರಾಮಪ್ಪ ಅವರ ಎಸ್.ಬಿ.ಐ. ಖಾತೆಯಿಂದ ಅಕ್ಟೋಬರ್ 29 ರಿಂದ ನವೆಂಬರ್ 5ರವರೆಗೆ ದಿನ ಬಿಟ್ಟು ದಿನ 9 ಸಾವಿರ, 10 ಸಾವಿರ ರೀತಿಯಲ್ಲಿ ಹಣ ದೋಚಲಾಗಿದೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಅದೇ ರೀತಿ ಮತ್ತೋರ್ವ ರೈತ ಹನುಮಂತಪ್ಪ ಅವರ ಕೆವಿಜಿ ಬ್ಯಾಂಕ್‌ ಖಾತೆಯಿಂದಲೂ ದಿನ ಬಿಟ್ಟು ದಿನ ಸಾವಿರಾರು ರೂ. ಹಣ ದೋಚಲಾಗಿದೆ ಎಂದು ಆರೋಪಿಸಲಾಗಿದೆ.  ಇಬ್ಬರು ರೈತರ ಖಾತೆಯಿಂದ ಒಟ್ಟು 1.24 ಲಕ್ಷ ರೂ. ಹಣ ಕಳವು ಆಗಿದೆ. ರೈತರ ದೂರಿನ ಅನ್ವಯ ಹಂಸಭಾವಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.