ಚಾಮರಾಜನಗರ: ಕಳೆದ ಒಂದೂವರೆ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಕಳವಾಗಿದ್ದ ಟಾಟಾ ಏಸ್ ವಾಹನವನ್ನು ಮಾಲಕನೇ ಮಂಡ್ಯ ಜಿಲ್ಲೆಯಲ್ಲಿ ಪತ್ತೆ ಹಚ್ಚಿದ ಘಟನೆ ರವಿವಾರ ವರದಿಯಾಗಿದೆ. ಮಾದೇಶ್ ಎಂಬವರೇ ತಮ್ಮ ವಾಹನವನ್ನು ಪತ್ತೆ ಹಚ್ಚಿದವರು.  2022 ರ ಜುಲೈ 10 ರಂದು ಮದ್ಯ ರಾತ್ರಿ  ಹನೂರು ಪಟ್ಟಣದ ಸುಮುಖ ಎಂಟರ್ ಪ್ರೆಸಸ್ ನಲ್ಲಿ ಕಿಡಿಗೇಡಿಗಳು ಒಳನುಗ್ಗಿ ಲ್ಯಾಪ್ ಟಾಪ್,  ಜೆ ಎಸ್ ಡಬ್ಲೂ ಶೀಟ್  ಗಳ ಜೊತೆಗೆ ಟಾ ಟಾ ಏಸ್ ವಾಹನವನ್ನು ಕದ್ದೊಯ್ದಿದ್ದರು. ಈ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ  ಹಚ್ಚುವಲ್ಲಿ ಹನೂರು ಪೋಲಿಸರು ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ. ಆದರೆ, ಕಳ್ಳತನ ನಡೆದ ಒಂದೂವರೆ ವರ್ಷದ ಬಳಿಕ ಿದೀಗ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ತಮ್ಮ ವಾಹನ ಓಡಾಡುತ್ತಿರುವುದನ್ನು ಮಾದೇಶ್ ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದ್ದಾರೆ.ಈ ಸಂಭಂಧ ಮಂಡ್ಯ ಜಿಲ್ಲೆಯ  ಪೊಲೀಸರು  ಸ್ಥಳಕ್ಕೆ ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.