ಬೆಂಗಳೂರು: ಮಾಜಿ ಸಿಚಿವ ಮುರುಗೇಶ್ ನಿರಾಣಿ ಅವರು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಯತ್ನಾಳ್ ಹೇಳಿಕೆಗಳ ಬಗ್ಗೆ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಮಂಗನಿಗೆ ಸಾರಾಯಿ ಕುಡಿಸಿ, ಅದರ ಬಾಲಕ್ಕೆ ಪಟಾಕಿ ಹಚ್ಚಿದ್ರೆ ಏನಾಗುತ್ತೋ ಅದೇ ರೀತಿ ಹುಚ್ಚರ ರೀತಿಯಲ್ಲಿ ಅವನು ಮಾತನಾಡುತ್ತಾ ಹೋಗುತ್ತಿದ್ದಾನೆ''  ಎಂದುಏಕವಚನದಲ್ಲೇ ಯತ್ನಾಳ ವಿರುದ್ಧ ಕಿಡಿಕಾರಿದರು.''ಯತ್ನಾಳ್‌ ಮಾತನಾಡುವ ಸಂಗತಿಗಳಿಗೆ ಬೆಲೆ ಇಲ್ಲ. ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡಬೇಕು'' ಎಂದು ಹೇಳಿದರು. 