ವೀರೇಂದ್ರ ಪಾಟೀಲ್ - ಬಿಜೆಪಿ ಮುಖಂಡಶಿವಮೊಗ್ಗ: ಶಿಕಾರಿಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ಹಾಗೂ ಅರಶಿಣಗೆರೆ ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಜಾಗದ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಅರಿಶಿಣಗಟ್ಟದಲ್ಲಿ ವರದಿಯಾಗಿದೆ. ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ದೃಶ್ಯವನ್ನು ಮಹಿಳೆಯ ಕುಟುಂಬಸ್ಥರು ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಗುಂಪು ಕಟ್ಟಿಕೊಂಡು ಶೋಭಾ ಹಾಗೂ ಪತಿ ರಾಮು ಎಂಬುವರ ಮನೆಗೆ ನುಗ್ಗಿದ ವೀರೇಂದ್ರ ಪಾಟೀಲ್, ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಗಲಾಟೆ ಮಾಡಿರುವುದಾಗಿ ಕುಟುಂಬಸ್ಥರು ಅರೋಪಿಸುತ್ತಿದ್ದಾರೆ.ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದೆ.