 ಕೊಲೆಗೀಡಾದ ಗ್ರಾಪಂ ಸದಸ್ಯ ಅನಿಲ್ ಕುಮಾರ್ಕೋಲಾರ, ನ.5 : ಕೋಲಾರ ಜಿಲ್ಲೆಯ ಮಾಲೂರು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಕುಮಾರ್ ಹಾಗೂ ಮತ್ತೋರ್ವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್​ಪೆಕ್ಟರ್​ ಸೇರಿದಂತೆ ಒಟ್ಟು 7 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.ಮಾಲೂರು ಠಾಣೆಯ ಎಎಸ್ಐ ಪ್ರಕಾಶ್, ಬೀಟ್ ಕಾನ್​ಸ್ಟೇಬಲ್ ಗಳಾದ ರಾಮಪ್ಪ, ಅನಂಥಮೂರ್ತಿ, ಡಿಎಆರ್ ಪೇದೆ ಅನಿಲ್ ಕುಮಾರ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನು ಶ್ರೀನಿವಾಸಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರಪ್ಪ, ಮುಖ್ಯ ಪೇದೆ ದೇವರಾಜ್ ರೆಡ್ಡಿ, ಮಂಜುನಾಥ್ ಮತ್ತು ಇಲಾಖೆಯಲ್ಲಿ ಅಶಿಸ್ತು ಹಿನ್ನಲೆ ಪೇದೆ ಅನಿಲ್ ಕುಮಾರ್ ಅವರನ್ನೂ ಸಹ ಅಮಾನತು ಮಾಡಿ ಎಸ್ಪಿ ಎಂ.ನಾರಾಯಣ ಅವರು ಆದೇಶ ಹೊರಡಿಸಿದ್ದಾರೆ.