ಸಿಎಂ ಸಿದ್ದರಾಮಯ್ಯ(PTI)ಬೆಂಗಳೂರು : ‘ಕೆಎಎಸ್ ಪರೀಕ್ಷೆಗಳನ್ನು ಮುಂದೂಡಬೇಕು ಎಂಬ ಆಗ್ರಹ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ ಭಂಡ ಸರಕಾರಕ್ಕೆ ಅದಕ್ಕೆ ಏಕೆ ಕಿವಿಗೊಡಲಿಲ್ಲ ಎಂಬುದಕ್ಕೆ ಸದ್ಯ ಕೆಎಎಸ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳೇ ಸಾಕ್ಷಿ’ ಎಂದು ಬಿಜೆಪಿ ಟೀಕಿಸಿದೆ.  ಶನಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಸಂಧಿ-ಸಮಾಸದ ಬಗ್ಗೆ ಭಾಷಣ ಮಾಡುವ,  ಕನ್ನಡರಾಮಯ್ಯ ಎಂದು ವಂದಿಮಾಗಧರಿಂದ ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಪ್ರಶ್ನೆ ಪತ್ರಿಕೆಯ 70 ಪ್ರಶ್ನೆಗಳ ಪೈಕಿ 60 ಪ್ರಶ್ನೆಗಳು ತಪ್ಪಿನಿಂದಲೇ ತುಂಬಿದ್ದವು ಎಂದು ಗಮನ ಸೆಳೆದಿದೆ.  ಸಹಸ್ರಾರು ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುವ ಬದಲು, ಕೂಡಲೇ ಕೆಎಎಸ್ ಮರು ಪರೀಕ್ಷೆಗೆ ಆದೇಶ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.  