ಬೆಂಗಳೂರು: ಬಿಗ್‌ಬಾಸ್ ಮನೆಯಿಂದ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ಬಳಿಕ ರಾಜ್ಯದಲ್ಲಿ ಸದ್ಯ ‘ಹುಲಿ ಉಗುರು’ ಚರ್ಚಾ ವಿಷಯವಾಗಿದ್ದು, ಹಲವು ನಟರು ಹುಲಿ ಉಗುರು ಧರಿಸಿರುವ ಬಗ್ಗೆ ಗಮನ ಸೆಳೆದಿರುವ ನೆಟ್ಟಿಗರು ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರು ತಮ್ಮ ಹುಲಿ ಉಗುರಿನ ಲಾಕೆಟ್ ಇರುವ ಸರದ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.   “ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು”‌ ಎಂದು ಜಗ್ಗೇಶ್‌ ಸಂದರ್ಶನದಲ್ಲಿ ಹೇಳಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ನೆಟ್ಟಿಗರು, ಜಗ್ಗೇಶ್‌ ಬಂಧನ ಯಾವಾಗ ಎಂದು ಪ್ರಶ್ನಿಸಿದ್ದಾರೆ.   ವಿನಯ್‌ ಗುರೂಜಿ ಎಂಬವರ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಹುಲಿ ಚರ್ಮದ ಮೇಲೆ ವಿನಯ್‌ ಅವರು ಕುಳಿತಿರುವ ಫೋಟೋಗಳನ್ನು ನೆಟ್ಟಿಗರು ವೈರಲ್‌ ಮಾಡಿದ್ದಾರೆ.   ನಟ ದರ್ಶನ್‌ ಕೂಡಾ ಈ ವಿವಾದದಲ್ಲಿ ಸಿಲುಕಿದ್ದು, ಹುಲಿ ಉಗುರಿನ ಲಾಕೆಟ್‌ ಇರುವ ಸರ ಧರಿಸಿದ್ದಾರೆ ಎಂದು ನೆಟ್ಟಿಗರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ದರ್ಶನ್‌ ಸೇರಿದಂತೆ ಹುಲಿ ಉಗುರು ಧರಿಸಿದ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಕೇಳಿ ಬಂದಿದೆ.   ಈ ನಡುವೆ, ದರ್ಶನ್‌ ಅವರನ್ನು ಉದ್ದೇಶ ಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಆರೋಪಿಸಿದ್ದು, ಇತರ ನಟರು ಹುಲಿ ಉಗುರು ಧರಿಸಿದ್ದಾರೆನ್ನಲಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಕಾನೂನು ಎಲ್ಲರಿಗೂ ಒಂದೇ ಅಲ್ವಾ @aranya_kfd ❓@Jaggesh2 ಅವರೇ ಒರಿಜಿನಲ್ ಹುಲಿ ಉಗುರು ಎಂದು ಸ್ವತಃ ಒಪ್ಪಿಕೊಂಡ ದಾಖಲೆ ಇರುವಾಗ ಎಲ್ಲರ ಚಿತ್ತ ನಿಮ್ಮ ಇಲಾಖೆಯ ಮುಂದಿನ ಹೆಜ್ಜೆಯತ್ತ ಇದೆ..ನೋಡೋಣ ಏನ್ ಕ್ರಮ ಜರುಗಿಸುವಿರೆಂದು.#ಹುಲಿ_ಉಗುರು pic.twitter.com/xkCHcAeENC ಕಾನೂನು ಬಂದಿದ್ದು 1972 ಅಲ್ಲಿ, ಹುಲಿ ಉಗುರು ಧರಿಸಬಾರದು ಅಂತ, ನಾನು ಆ ಕಾನೂನು ತಪ್ಪು ಅಂತಿಲ್ಲ, ಎಲ್ಲರಿಗೂ ಒಂದೇ ಆಗ್ಬೇಕು ಅಲ್ವಾ ? ಇಲ್ಲಿ ಇರೋದು ಹಾಗಾದ್ರೆ ಬೆಕ್ಕು ಉಗುರಾ ? ಇದು ಪ್ರಚೋದನಕಾರಿ ಅಲ್ವಾ ? #tigerclaw #tiger #bigbosskannada #KicchaSudeep #jaggesh pic.twitter.com/DMuBcQS78C ಅರಣ್ಯ ಅಧಿಕಾರಿಗಳೇ ಇಲ್ಲೊಂದು ಹುಲಿ ಉಗುರು ಪತ್ತೆಯಾಗಿದೆ..#savetiger #tigerclaw pic.twitter.com/qpPjda1lxi ಜನ ಸಾಮಾನ್ಯರಿಗೊಂದು ನ್ಯಾಯ ಈ ಸ್ವಾಮೀಜಿಗೆ ಒಂದು ನ್ಯಾಯ ಅಲ್ಲವೆ ಅರಣ್ಯ ಇಲಾಖೆ ಅವರೆ.... ಹುಲಿ ಉಗುರು ಆಕೊಂಡವನ ಮೇಲೆ ಹಾಕೋ ಅಪರಾಧ ಕೇಸು ಹುಲಿ ಚರ್ಮದ ಮೇಲೆ ಕುತಿರೋ ಈತನ ಮೇಲೆ ಯಾಕಿಲ್ಲ ಎಂದು ಅರಣ್ಯ ಇಲಾಖೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕಿದೆ...#savewildlife#ವನ್ಯಜೀವಿಗಳನ್ನುರಕ್ಷಿಸಿರಿ pic.twitter.com/DM6v5tsRfz Some cunning foxes have started their routine activities like triggering, targeting & creating Hateredness!Our respective hero's have also been in those "ಹುಲಿ ಉಗುರು" lockets!!Why only Darshan.. Dboss.. Etc??? #BossOfSandalwood #Dboss #Kaatera @dasadarshan pic.twitter.com/SRnuR5ZxA7 